ಚಿತ್ರದುರ್ಗ : ಪಾರ್ಲಿಮೆಂಟ್ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿರುವುದನ್ನು ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಸ್ವಾಗತಿಸಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಿರುವುದರಿಂದ ವಕ್ಫ್ ವ್ಯವಸ್ಥೆಯಲ್ಲಿ ಹಲವು ದಶಕಗಳಿಂದ ಇದ್ದ ಪಾರದರ್ಶಕತೆ ಕೊರತೆ ನೀಗಿದಂತಾಗಿದ್ದು, ಇದರಿಂದ ಬಡ ಮುಸ್ಲಿಂರಿಗೆ ಹಾಗೂ ರೈತರಿಗೆ ಅನುಕೂಲವಾಗಿದೆಯಲ್ಲದೆ ಸಾಮಾಜಿಕ, ಆರ್ಥಿಕ ನ್ಯಾಯದ ದೃಷ್ಟಿಯಿಂದ ಉಭಯ ಸದನಗಳಲ್ಲಿ ಮಹತ್ವದ ತೀರ್ಮಾನ ಕೈಗೊಂಡಂತಾಗಿದೆ.
ಹನ್ನೆರಡು ಗಂಟೆಗಳ ಕಾಲ ನಡೆದ ಸುಧೀರ್ಘ ಚರ್ಚೆಯ ನಂತರ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿದ್ದು, ಮಸೂದೆಯ ಪರವಾಗಿ 288 ಮತಗಳು. ವಿರುದ್ದವಾಗಿ 232 ಮತಗಳು ಬಿದ್ದಿವೆ. ಇದಾದ ನಂತರ ರಾಜ್ಯಸಭೆಯಲ್ಲಿಯೂ 13 ಗಂಟೆಗಳ ಕಾಲ ಚರ್ಚೆ ನಡೆಸಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿರುವುದಕ್ಕೆ ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ.ಮುಖಂಡರಿಗೆ ಎಂ.ಶಿವಮೂರ್ತಿ ಅಭಿನಂದಿಸಿದ್ದಾರೆ.