ನವದೆಹಲಿ: ಆಲಿಕಲ್ಲು ಮಳೆ ಸುರಿಯುತ್ತಿರುವಾಗ 200 ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವೊಂದು ದೊಡ್ಡ ಅನಾಹುತದಿಂದ ಪಾರಾಗಿದೆ.
ಇಂಡಿಗೋ ವಿಮಾನ 6E2142 ದೆಹಲಿಯಿಂದ ಜಮ್ಮುಕಾಶೀರದ ಶ್ರೀನಗರಕ್ಕೆ 200 ಪ್ರಯಾಣಿಕರನ್ನು ಹೊತ್ತು ಆಕಾಶದಲ್ಲಿ ಪ್ರಯಾಣಿಸುತ್ತಿತ್ತು. ವಿಮಾನ ಆಕಾಶದಲ್ಲಿ ಇರುವಾಗಲೇ ಬಲವಾದ ಆಲಿಕಲ್ಲು ಮಳೆ ಆರಂಭವಾಗಿದೆ. ಆಲಿಕಲ್ಲುಗಳು ವಿಮಾನದ ಮೇಲೆ ಬೀದ್ದಿದ್ದರಿಂದ ಶಬ್ಧ ಕೂಡ ಭಯ ಮೂಡಿಸಿದೆ. ಆಲಿಕಲ್ಲು ಮಳೆ ಜೊತೆಗೆ ಗುಡುಗು, ಮಿಂಚು, ಗಾಳಿಯೂ ಜೋರಾಗಿ ಬೀಸುತ್ತಿದ್ದರಿಂದ ಇಡೀ ವಿಮಾನವೇ ಆಕಾಶದಲ್ಲಿ ಅಲುಗಾಡಿದ್ದು ಭಾರೀ ಆತಂಕಕ್ಕೆ ಕಾರಣವಾಗಿತ್ತು.
ಪ್ರಕ್ಷುಬ್ಧ ಹವಾಮಾನದಿಂದಾಗಿ ವಿಮಾನ ಪೈಲಟ್ ತಕ್ಷಣ ಶ್ರೀನಗರದ ವಾಯು ಸಂಚಾರ ನಿಯಂತ್ರಣಕ್ಕೆ ತುರ್ತು ವರದಿ ಮಾಡಿದ್ದಾರೆ. ತುರ್ತು ವರದಿ ಬೆನ್ನಲ್ಲೇ ಸಂಜೆ 6:30ಕ್ಕೆ ಸುರಕ್ಷಿತವಾಗಿ ವಿಮಾನ ಶ್ರೀನಗರದಲ್ಲಿ ಲ್ಯಾಂಡ್ ಆಗಿದೆ.