ರಾಜ್ಯ ಬಜೆಟ್‌ನಲ್ಲಿ ಕರಾವಳಿಗೆ ಅನೇಕ ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ. ಕರ್ನಾಟಕದ ಮೊದಲ “ವಾಟರ್ ಮೆಟ್ರೋ” ಯೋಜನೆಯನ್ನು ಮಂಗಳೂರಿನಲ್ಲಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ.
ಮಂಗಳೂರಿಗೆ ಅಂತರಾಷ್ಟ್ರೀಯ ಕ್ರೂಸ್ ಯೋಜನೆ ಮತ್ತು ಕೋಸ್ಟಲ್ ಬರ್ತ್ ಯೋಜನೆ ಕೂಡ ಘೋಷಣೆಗೊಂಡಿದ್ದು, ಇದು ಸಮುದ್ರ ಮತ್ತು ಜಲಮಾರ್ಗಗಳಲ್ಲಿ ಸರಕು-ಪ್ರಯಾಣಿಕರ ಚಲನೆಯನ್ನು ಉತ್ತೇಜಿಸುತ್ತದೆ.
ಹೊನ್ನಾವರ ಹಾಗೂ ಮಂಕಿಯಲ್ಲಿ ಬಂದರು ನಿರ್ಮಾಣ, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕೇಂದ್ರ, ಮತ್ತು ನದಿ ಕ್ರೂಸ್ ಪ್ರವಾಸೋದ್ಯಮ ವಿಸ್ತರಣೆಗೆ ಯೋಜನೆ ಸಿದ್ಧವಾಗಿದೆ.
ಏನಿದು ವಾಟರ್ ಮೆಟ್ರೋ?
ಎಲೆಕ್ಟ್ರಿಕ್-ಹೈಬ್ರಿಡ್ ಫೆರಿಗಳನ್ನು ಬಳಸಿ ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸುವ ಸರಕಾರಿ ಯೋಜನೆಯೇ ವಾಟರ್ ಮೆಟ್ರೋ. ಇದು ಕರಾವಳಿಯ ಜಲಸಾರಿಗೆ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ಕಾರಣವಾಗಲಿದೆ.
