ಬೆಂಗಳೂರು: ಕುಮಾರಸ್ವಾಮಿ ಎಲ್ಲರ ರಾಜೀನಾಮೆ ಅವರು ಕೇಳ್ತಿದ್ರಲ್ವಾ ಆದರೆ ನಾನು ಅವರ ರಾಜೀನಾಮೆ ಕೇಳಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಒಂದು ಮಾಹಿತಿ ಲಭಿಸಿದೆ. ಬಿಡದಿ ತೋಟದ ಮನೆಯನ್ನು ಸರ್ವೆ ಮಾಡಿ, ಮಾರ್ಕಿಂಗ್ ಮಾಡಿ, ಅಕ್ರಮ ಆಗಿದ್ದರೆ ತೆರವು ಮಾಡಿ ಎಂದು ಕೋರ್ಟ್ ತಿಳಿಸಿದೆ ಎಂದು ಹೇಳಿದರು.
ಕುಮಾರಸ್ವಾಮಿ ಅವರು ಸಚಿವರಾಗಿ ಕೆಲಸ ಮಾಡಲಿ. ಅವರ ಥರ ನನಗೆ ಹೊಟ್ಟೆ ಉರಿ ಇಲ್ಲ. ರಾಜೀನಾಮೆ ಕೇಳಲ್ಲ ಎಂದಿದ್ದಾರೆ.