ನವದೆಹಲಿ: ಪಹಲ್ಗಾಮ್ನಲ್ಲಿ ನಡೆದ ದಾಳಿ ಬಳಿಕ ಭಾರತ ಉಗ್ರರಿಗೆ ನರಕ ದರ್ಶನವನ್ನು ಮಾಡಿಸಿದೆ. ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇರುವ ಉಗ್ರರ ನೆಲೆ ಮೇಲೆ ದಾಳಿ ನಡೆಸಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇದೀಗ ಈ ಕುರಿತು ಕೇಂದ್ರ ಸಚಿವ ರಾಜನಾಥ್ ಸಿಂಗ್ (Rajnath Singh) ಪ್ರತಿಕ್ರಿಯೆ ನೀಡಿದ್ದಾರೆ. ಅವರು ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ್ದಾರೆ. ಯಾವುದೇ ಅಮಾಯಕರು ಸಾಯದಂತೆ ಖಚಿತಪಡಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ನಮ್ಮ ಅಮಾಯಕರನ್ನು ಕೊಂದವರನ್ನೇ ನಾವು ಕೊಂದಿದ್ದೇವೆ” ಎಂದು ಸಿಂಗ್ ಹೇಳಿದ್ದಾರೆ.
“ಅಶೋಕ ವಾಟಿಕವನ್ನು ನಾಶಮಾಡುವಾಗ ಹನುಮಾನ್ ಜಿ ಅನುಸರಿಸಿದ ಕ್ರಮವನ್ನು ನಾವು ಅನುಸರಿಸಿದ್ದೇವೆ. ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ನಾವು ಕೊಂದಿದ್ದೇವೆ. ಭಾರತವು ತನ್ನ ನೆಲದ ಮೇಲಿನ ದಾಳಿಗೆ ‘ಪ್ರತಿಕ್ರಿಯಿಸುವ ಹಕ್ಕು ಭಾರತಕ್ಕಿದೆ ಎಂದು ಅವರು ಹೇಳಿದರು. ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಬುಧವಾರ ಮುಂಜಾನೆ ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿರುವ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಸೇರಿದಂತೆ ಒಂಬತ್ತು ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿದವು. 25 ನಿಮಿಷಗಳ ಕಾಲ ನಡೆದ ದಾಳಿಯಲ್ಲಿ ಉಗ್ರರ ಪ್ರಮುಖ ನಾಯಕರು ಸೇರಿದಂತೆ ಹಲವರು ಹತರಾಗಿದ್ದಾರೆ.
ಆಪರೇಶನ್ ಸಿಂಧೂರ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif)ನ ತುರ್ತು ಸಭೆ ನಡೆಸಿದ್ದಾರೆ. ಉಗ್ರರ ಕ್ಯಾಂಪ್ ಮೇಲೆ ಭಾರತ ನಡೆಸಿದ ದಾಳಿಯನ್ನು ಪಾಕಿಸ್ತಾನ ಯುದ್ಧ ಕೃತ್ಯ ಎಂದಿದೆ. ಇಷ್ಟೇ ಅಲ್ಲ ಭಾರತದ ಈ ದಾಳಿಗೆ ಪಾಕಿಸ್ತಾನ ತಕ್ಕ ಉತ್ತರ ನೀಡಲಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಪಾಕ್ ಪ್ರಧಾನಿ ಪತ್ರಿಕಾಗೋಷ್ಠಿ ನಡೆಸಿ ಭಾರತದ ದಾಳಿಯನ್ನು ಅಪ್ರಚೋದಿತ ಹಾಗೂ ಹೇಯ ಕೃತ್ಯ ಎಂದು ಅವರು ಕರೆದಿದ್ದಾರೆ. ಇಷ್ಟೇ ಅಲ್ಲ ಭಾರತದ ಈ ದಾಳಿಗೆ ಪಾಕಿಸ್ತಾನ ತಕ್ಕ ಉತ್ತರ ನೀಡಲಿದೆ ಎಂದು ಪಾಕಿಸ್ತಾನ ಪ್ರಧಾನಿ ಹಬಾಜ್ ಷರೀಫ್ ಹೇಳಿದ್ದಾರೆ. ಭಾರತ ಉಗ್ರರ ಕ್ಯಾಂಪ್ ಎಂದು ನಾಗರೀಕರ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನ ನೆಲದ ಮೇಲೆ ಭಾರತ ನಡೆಸಿದ ದಾಳಿಯನ್ನು ಯಾವತ್ತೂ ಸಹಿಸುವುದಿಲ್ಲ ಎಂದಿದ್ದಾರೆ.
 
				 
         
         
         
															 
                     
                     
                     
                    


































 
    
    
        