ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳು ಬೆವರಿನ ಮೂಲಕವೂ ಹೊರಗೆ ಹೋಗುವುದು. ದೇ ರೀತಿಯ ಅತಿಯಾದ ಬಿಸಿಲಿಗೆ ಹೊರಗೆ ಹೋದ ಸಂದರ್ಭದಲ್ಲೂ ದೇಹದಲ್ಲಿ ಬೆವರುವುದು ಸಹಜ.
.ಆದರೆ ರಾತ್ರಿ ಮಲಗಿದ ವೇಳೆ ಬೆವರು ಬಂದರೆ ಅದಕ್ಕೆ ಬೇರೆಯೇ ರೀತಿಯ ಕಾರಣಗಳು ಇವೆ ಎಂದರೆ ನೀವೂ ನಂಬುತ್ತೀರಾ? ರಾತ್ರಿ ಮಲಗಿದ ಬೆವರಲು ಕಾರಣಗಳಿವೆ.
ಆರೋಗ್ಯ ತಜ್ಞರು ಪ್ರಕಾರ ರಾತ್ರಿ ವೇಳೆ ನಿಮಗೆ ಅತಿಯಾಗಿ ಬೆವರಿದರೆ, ಖಂಡಿತವಾಗಿಯೂ ನಿಮ್ಮ ಮೈಯೆಲ್ಲಾ ಒದ್ದೆ ಆಗಿರುವುದು ಮತ್ತು ಇದು ಸಾಮಾನ್ಯವಲ್ಲವೆಂದು ಖಂಡಿತವಾಗಿಯೂ ನಿಮಗೆ ಅನಿಸಿರಬಹುದು.
ದೇಹದ ಉಷ್ಣತೆಯಲ್ಲಿ ಬದಲಾವಣೆ ಆಗುವ ಕಾರಣದಿಂದಾಗಿ ಮಲಗಿದ ವೇಳೆ ಬೆವರಲು ಕಾರಣವಾಗಿದೆ. ಕೆಲವೊಂದು ಸಂದರ್ಭದಲ್ಲಿ ರಾತ್ರಿ ವೇಳೆ ಬೆವರುವುದು ಸಾಮಾನ್ಯ ವಿಚಾರವಾಗಿರುವುದು.
ಆದರೆ ಇದು ನಮಗೆ ತೀರ ಕಿರಿಕಿರಿ ಉಂಟು ಮಾಡುವುದು ನಿಜ. ಆದರೆ ಮಲಗುವ ವೇಳೆ ಬೆವರುತ್ತಲಿದ್ದರೆ ಆಗ ನೀವು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬಹುದು.