ಬೆಂಗಳೂರು: ಹಕ್ಕಿ ಜ್ವರ ರೋಗ ಪತ್ತೆಯಾದ ಸ್ಥಳದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಳಿಗಳನ್ನು ಕೊಂದು ಹೂಳುವಂತೆ ತಿಳಿಸಲಾಗಿದೆ. ರಾಜ್ಯದ ಇತರೆಡೆ ಕೋಳಿ ಜ್ವರ ಹಬ್ಬಿದ್ದರೂ ಅಲ್ಲಿಯೂ ಇದೇ ಮಾರ್ಗಸೂಚಿ ಅನ್ವಯವಾಗುವ ಸಾಧ್ಯತೆ ಇದೆ.!
ಈ ಗಾಗಲೇ ಈ ಎರಡು ಜಿಲ್ಲೆಗಳಲ್ಲಿ ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಳಿಗಳನ್ನು ಕೊಂದು ಹೂಳುವಂತೆ ತಿಳಿಸಲಾಗಿದೆ.
ಕೋಳಿ ಫಾರಂ ಸುತ್ತಲಿನ 3 ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ಪ್ರದೇಶವಾಗಿ ಗುರುತಿಸಬೇಕು. ಜ್ವರ ಪತ್ತೆಯಾದ ಒಂದು ಕಿಲೋಮೀಟರ್ ವ್ಯಾಪ್ತಿಯ ಕೋಳಿಗಳನ್ನು ಕೊಂದು ಮೊಟ್ಟೆಯ ಸಮೇತ ಹೂಳಬೇಕು. ಕಾರ್ಮಿಕರು ಪಿಪಿಇ ಡ್ರೆಸ್ ಧರಿಸಬೇಕು. 10 ಕಿ.ಮೀ.ನಲ್ಲಿ ಪೌಲ್ಟ್ರಿ, ಮೊಟ್ಟೆ ಅಂಗಡಿಗಳನ್ನು ಮುಚ್ಚಬೇಕು. ಕೋಳಿಗಳನ್ನು ಹನನ ಮಾಡಿದ ಕಾರ್ಮಿಕರು ನಂತರದ 10 ದಿನಗಳ ಕಾಲ ಐಸೋಲೇಟ್ ಆಗಿರಬೇಕು. ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಲಾಗಿದೆ.