ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ಟ್ರಿಪ್ ಹೋಗಿದ್ದ ಮಗ ವಾಪಸಾಗುವಷ್ಟರಲ್ಲಿ ತಾಯಿ ಹಸಿವಿನಿಂದ ಸಾವನ್ನಪ್ಪಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ.
ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದಿರುವ ತಾಯಿಯನ್ನು ಮಗನೊಬ್ಬ ಭಿಕ್ಷುಕರಿಗಿಂತಲೂ ಕಡೆಯಾಗಿ ನೋಡಿದ್ದಾನೆ. ಹೌದು, ಭೋಪಾಲ್ನ ನಿಶಾತ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಲಲಿತಾ ದುಬೆ ಎಂಬ ಮಹಿಳೆ ತನ್ನ ಮಗ ಅರುಣ್ನೊಂದಿಗೆ ವಾಸಿಸುತ್ತಿದ್ದರು. ಲಲಿತಾ ದುಬೆಯನ್ನು ಮನೆಯೊಳಗೆ ಕೂಡಿ ಹಾಕಿ ಅರುಣ್ ತನ್ನ ಪತ್ನಿಯೊಂದಿಗೆ ಉಜ್ಜಯಿನಿಯ ಮನೆಗೆ ಹೋಗಿದ್ದ. ಬಳಿಕ ಅರುಣ್ ಇಂದೋರ್ನಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿ ಫ್ಯಾಮಿಲಿ ಸಮೇತ ಉಜ್ಜಿಯಿನಿಗೆ ಹೋಗುತ್ತಿರುವುದಾಗಿ ತಿಳಿಸಿದ್ದ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ವೃದ್ದೆ ಆಹಾರವಿಲ್ಲದೆ ಪರದಾಡಿದ್ದಾರೆ. ಮಂಚದ ಮೇಲೆ ಮಲಗಿದ್ದ ಅವರು ಊಟ-ತಿಂಡಿ ಇಲ್ಲದೆ ಪರದಾಡಿದ್ದಾರೆ. ಅಲ್ಲದೇ,24 ಗಂಟೆ ನೀರು ಸಹ ಕುಡಿಯದೆ ಇದ್ದದ್ದರಿಂದ ತಾಯಿ ಜೀವಬಿಟ್ಟಿದ್ದಾಳೆ. ತಾಯಿಯ ಅಸಹಾಯ ಪರಿಸ್ಥಿತಿಗೆ ಸ್ಪಂದಿಸದ ಪುತ್ರನನ್ನ ಕರೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೃತ ವೃದ್ಧೆಯ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.