1) ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ:
ಈ ಸಾಲದ ಬಡ್ಡಿ ದರವು 7% ಆಗಿದ್ದು ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು ಮತ್ತು ಈ ಸಾಲದ ವಿವರ ಇನ್ನೂ ಕೆಳಗಡೆ ನೀಡಲಾಗಿದೆ.ಇದರಲ್ಲಿ ಸುಮಾರು ಒಂದು ಪಾಯಿಂಟ್ ಐದು ಲಕ್ಷಗಳಿಂದ ಮೂರು ಲಕ್ಷದವರೆಗೆ ನೀವು ಸಾಲವನ್ನು ಪಡೆಯಬಹುದು ಮತ್ತು ಸರಿಯಾದ ಸಮಯಕ್ಕೆ ಸಾಲವನ್ನು ಪಾವತಿ ಮಾಡಿದರೆ ಕೇವಲ ಮೂರು ಪ್ರತಿಶತದಷ್ಟು ಬಡ್ಡಿಯನ್ನು ಕಟ್ಟಬೇಕಾಗುತ್ತದೆ ಇದಲ್ಲದೇನೇ ಎರಡು ಪರ್ಸೆಂಟ್ದಷ್ಟು ರಿಯಾಯಿತಿಯು ಸಿಗುತ್ತದೆ ಅಂದರೆ ನಿಮಗೆ ವರ್ಷಕ್ಕೆ ನಾಲ್ಕು ಪರ್ಸೆಂಟ್ ಬಡ್ಡಿ ದರದಲ್ಲಿ ಈ ಯೋಜನೆ ಅಡಿ ಸುಮಾರು 1.6 to 3 ಲಕ್ಷ ಸಾಲವನ್ನು ಪಡೆಯಬಹುದು.
ಯಾವುದೇ ರೀತಿ ಹೊಲದ ಬೆಳೆಯ ಮೇಲೆ ಮತ್ತು ಬೆಳೆಯ ಬರುವ ಮುನ್ನವೇ ಸಾಲವನ್ನು ತೆಗೆದುಕೊಳ್ಳಬಹುದು ಮತ್ತು ಸರಿಯಾದ ಸಮಯಕ್ಕೆ ಸಾಲವನ್ನು ಕಟ್ಟಬೇಕಾಗುತ್ತದೆ ಈ ಸಾಲವು ನಿಮಗೆ ಸಾಮಾನ್ಯವಾಗಿ ಗ್ರಾಮೀಣ ವಿಕಾಸ್ ಬ್ಯಾಂಕ್ ನಲ್ಲಿ ನೀಡಲಾಗುತ್ತದೆ ನೀವು ಸಾಲಕ್ಕಾಗಿ ತಿರುಗಾಡುತ್ತಿದ್ದರೆ ಈ ಸಾಲ ಪಡೆಯಬೇಕಾದರೆ ನೀವು ಇಲ್ಲಿ ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು? ಅರ್ಜಿ ನಮೂನೆ.
*ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೋಗಳು.
*ಡ್ರೈವಿಂಗ್ ಲೈಸೆನ್ಸ್/ಆಧಾರ್ ಕಾರ್ಡ್/ವೋಟರ್ ಐಡೆಂಟಿಟಿ ಕಾರ್ಡ್/ಪಾಸ್‌ಪೋರ್ಟ್ ಇತ್ಯಾದಿ ಐಡಿ ಪುರಾವೆಗಳು. ಯಾವುದೇ ಒಂದು ದಾಖಲೆಯನ್ನು ಸಲ್ಲಿಸಬೇಕಾಗಿದೆ.
*ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಇತ್ಯಾದಿ ವಿಳಾಸ ಪುರಾವೆ.
*ಕಂದಾಯ ಅಧಿಕಾರಿಗಳು ಸರಿಯಾಗಿ ಪ್ರಮಾಣೀಕರಿಸಿದ ಭೂಹಿಡುವಳಿಯ ಪುರಾವೆ.
*ವಿಸ್ತೀರ್ಣದೊಂದಿಗೆ ಬೆಳೆ ಮಾದರಿ (ಬೆಳೆದ ಬೆಳೆಗಳು).
*ಅನ್ವಯವಾಗುವಂತೆ ರೂ.1.60 ಲಕ್ಷಗಳು / ರೂ.3.00 ಲಕ್ಷಗಳಿಗಿಂತ ಹೆಚ್ಚಿನ ಸಾಲದ ಮಿತಿಗೆ ಭದ್ರತಾ ದಾಖಲೆಗಳು.
*ಮಂಜೂರಾತಿಗೆ ಅನುಗುಣವಾಗಿ ಯಾವುದೇ ಇತರ ದಾಖಲೆ.
2)ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ದೊರೆಯುವ ರೈತರಿಗೆ ಬೆಳೆ ಸಾಲ:
ಈ ಸಲವೂ ಬಹಳಷ್ಟು ಜನರು ಅಂದರೆ 100ರಲ್ಲಿ 99 ರಷ್ಟು ರೈತರು ಈ ಸಾಲವನ್ನು ತೆಗೆದುಕೊಂಡಿರುತ್ತಾರೆ ಏಕೆಂದರೆ ಇದು ಕೇವಲ ವರ್ಷಕ್ಕೆ ನಿಮಗೆ 200 ಬಡ್ಡಿ ದರದಲ್ಲಿ ಹಣವು ದೊರೆಯುತ್ತದೆ. ಐವತ್ತು ಸಾವಿರದಿಂದ ಲಕ್ಷದವರೆಗೆ ನೀವು ನಿಮ್ಮ ಕೃಷಿಪತ್ತಿನ ಸಹಕಾರಿ ಸಂಘಗಳಲ್ಲಿ ಬೆಳೆ ಸಾಲವನ್ನು ತೆಗೆದುಕೊಳ್ಳಬಹುದು ಇದು ಎಲ್ಲಾ ಕಡೆ ಇರುತ್ತದೆ ನೀವು ಏನಾದರೂ ತೆಗೆದುಕೊಂಡಿಲ್ಲದಿದ್ದರೆ ನೀವು ಕೂಡ ನಿಮ್ಮ ಜಮೀನು ಹೊಂದಿದ್ದರೆ ಜಮೀನಿನಲ್ಲಿ ಬೆಳೆಗಳು ಬೆಳೆಯುತ್ತಿದ್ದರೆ ಸಾಲವನ್ನು ಪಡೆದುಕೊಳ್ಳಬಹುದು.
3) ನೀವು ಏನಾದರೂ ಖರೀದಿ ಮಾಡುತ್ತಿದ್ದರೆ ಅದಕ್ಕಾಗಿಯೂ ಸಹ ಲೋನ್ ತೆಗೆದುಕೊಳ್ಳಬಹುದು:
ಟ್ರ್ಯಾಕ್ಟರ್ ಹಾಗೂ ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು ಬಯಸಿದ್ದರೆ ಅದಕ್ಕೂ ಕೂಡ ನೀವು ಇದು ಕೂಡ ಒಂದು ಟರ್ಮ್ ಲೋನ್ ಆಗಿರುತ್ತದೆ. 2,00,000 ದಿಂದ ಸುಮಾರು 25 ಲಕ್ಷದವರೆಗೆ ಲೋನ್ ತೆಗೆದುಕೊಳ್ಳಬಹುದು. ಈ ಸಾಲವನ್ನು ತೆಗೆದುಕೊಳ್ಳಬೇಕಾದರೆ ನೀವು ಅಡಮಾನವನ್ನು ಇಡಬೇಕಾಗುತ್ತದೆ. ಟ್ರ್ಯಾಕ್ಟರ್ ಕರಿದಿ ಪತ್ರವಾದರೂ ನೀವು ಇಡಬಹುದು ಅಥವಾ ಇದಿಲ್ಲದಿದ್ದರೆ ನಿಮ್ಮ ಪಹಣಿಯನ್ನು ನೀಡುವ ಮೂಲಕ ಲೋನ್ ತೆಗೆದುಕೊಳ್ಳಬಹುದು. ಈ ಸಾಲವು ನಿಮಗೆ ಎಸ್‌ಬಿಐ ನಲ್ಲಿ ದೊರೆಯುತ್ತದೆ.
ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳು!
*ಅರ್ಜಿ ನಮೂನೆಯಲ್ಲಿ ಸರಿಯಾಗಿ ಭರ್ತಿ ಮಾಡಿ
*ಅಧಿಕೃತ ಡೀಲರ್‌ನಿಂದ ಟ್ರ್ಯಾಕ್ಟರ್‌ನ ಉಲ್ಲೇಖ.
*ಗುರುತಿನ ಪುರಾವೆ- ಮತದಾರರ ಗುರುತಿನ ಚೀಟಿ/ಪಾನ್ ಕಾರ್ಡ್/ಪಾಸ್‌ಪೋರ್ಟ್/ಆಧಾರ್ ಕಾರ್ಡ್/ಚಾಲನಾ ಪರವಾನಗಿ ಇತ್ಯಾದಿ.
*ವಿಳಾಸ ಪುರಾವೆ: ಮತದಾರರ ಗುರುತಿನ ಚೀಟಿ/ಪಾಸ್‌ಪೋರ್ಟ್/ಆಧಾರ್ ಕಾರ್ಡ್/ಚಾಲನಾ ಪರವಾನಗಿ ಇತ್ಯಾದಿ.
*ಕೃಷಿ ಭೂಮಿ/ಕೃಷಿಯ ಪುರಾವೆ.
*ಮಂಜೂರಾತಿಗೆ ಅನುಗುಣವಾಗಿ ಯಾವುದೇ ಇತರ ದಾಖಲೆ.
4) ಕಿಸಾನ್ ಸಮೃದ್ಧಿ ರಿನ್ ಯೋಜನೆ:
ಈ ಯೋಜನೆ ನಿಮಗೆ 5 ಲಕ್ಷದಿಂದ 5 ಕೋಟಿಯವರೆಗೆ ಸಾಲವನ್ನು ನೀಡುವ ಏಕೈಕ ಕೃಷಿ ಸಾಲವಾಗಿದ್ದು ಈ ಯೋಜನೆ ಅಡಿ ನೀವು ಬಹಳಷ್ಟು ದೊಡ್ಡ ದೊಡ್ಡ ಕೃಷಿ ಚಟುವಟಿಕೆಗಳಿಗೆ ಸಾಲವನ್ನು ಪಡೆದುಕೊಳ್ಳಬಹುದು ಮತ್ತು ಇಷ್ಟು ಸಾಲವನ್ನು ನೀಡುತ್ತಾರೆ ಎಂಬುದು ನಿಮಗೆ ತಿಳಿದಿದ್ದರೆ. ಖಂಡಿತವಾಗಿಯೂ ಇದು ಅಡಮಾನವಿಡುವ ಸಾಲವಾಗಿದ್ದು ನೀವು ಸಾಲವನ್ನು ತೆಗೆದುಕೊಳ್ಳಬೇಕಾದರೆ ನೀವು ಇನ್ನಿತರ ದಾಖಲೆಗಳನ್ನು ಅಡಮಾನ ಇಡಬೇಕಾಗುತ್ತದೆ.
ಪ್ರಗತಿಪರ ಅಥವಾ ವೈಜ್ಞಾನಿಕ ಕೃಷಿಯಲ್ಲಿ ತೊಡಗಿರುವ ರೈತರು,ಕನಿಷ್ಠ ಭೂಮಿ ಹಿಡುವಳಿ: ಕನಿಷ್ಠ 4 ಎಕರೆ ಜಮೀನು ಹೊಂದಿರುವ ಅಥವಾ ರೈತರು ವೈಜ್ಞಾನಿಕ ವಿಧಾನದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರೆಡಿಟ್ ಸ್ಕೋರ್: 650 ಮತ್ತು ಹೆಚ್ಚಿನದು. ಯಾವುದೇ ಕ್ರೆಡಿಟ್ ಇತಿಹಾಸವಿಲ್ಲದ ಗ್ರಾಹಕರು ಸಹ ಅರ್ಹರಾಗಿರುತ್ತಾರೆ. ವಯಸ್ಸಿನ ಮಾನದಂಡ: ಕನಿಷ್ಠ. 18 ವರ್ಷಗಳು, ಗರಿಷ್ಠ ಇಲ್ಲ. (60 ವರ್ಷಕ್ಕಿಂತ ಮೇಲ್ಪಟ್ಟವರು, ಸಹ-ಸಾಲಗಾರನು ಕಡ್ಡಾಯವಾಗಿದೆ). ಕಾರ್ಪೊರೇಟ್‌ಗಳಿಗೆ: ಆಡಿಟ್ ಮಾಡಿದ/ವಾಸ್ತವ/ಯೋಜಿತ ಬ್ಯಾಲೆನ್ಸ್ ಶೀಟ್ ಪ್ರಕಾರ (ಸಂಘಟಿತ ವರ್ಷದ ಆಧಾರದ ಮೇಲೆ) 2 ವರ್ಷಗಳವರೆಗೆ ಲಾಭ ಗಳಿಸುತ್ತಿರಬೇಕು.
50.00 ಲಕ್ಷಗಳ ಕೆಳಗೆ- 1-ವರ್ಷದ MCLR ಮೇಲೆ 1.80%
₹50.00 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚು- ಕ್ರೆಡಿಟ್ ರಿಸ್ಕ್ ಅಸೆಸ್‌ಮೆಂಟ್ ಆಧರಿಸಿ. ವಿವರವಾದ ಮತ್ತು ನವೀಕರಿಸಿದ ಮಾಹಿತಿಗಾಗಿ, ದಯವಿಟ್ಟು ನಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ.
ಲೋನ್ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು!
*KYC ದಾಖಲೆಗಳು
*ಸಾಲದ ಅರ್ಜಿ
*ಲೀಸ್ ಸಾಗುವಳಿದಾರರ ಸಂದರ್ಭದಲ್ಲಿ ಭೂ ಮಾಲೀಕತ್ವದ ಪುರಾವೆ/ ಗುತ್ತಿಗೆ ದಾಖಲೆ.
*ವಿಸ್ತೀರ್ಣದೊಂದಿಗೆ ಕ್ರಾಪಿಂಗ್ ಮಾದರಿಯ (ಬೆಳೆದ ಬೆಳೆಗಳು) ದಾಖಲೆ.
*ಮಂಜೂರಾತಿಗೆ ಅನುಗುಣವಾಗಿ ಯಾವುದೇ ಇತರ ದಾಖಲೆ.
ಈ ರೀತಿಯಾಗಿ ನಾವು ತಿಳಿಸಿರುವ ನಾಲ್ಕು ಸಾಲುಗಳು ರೈತರಿಗೆ ತುಂಬಾ ಅನುಕೂಲಕರವಾಗಿದ್ದು ಮತ್ತು ಪ್ರತಿ ರೈತರು ಇದರ ಮೊರೆ ಹೋಗುತ್ತಾರೆ. ಏನೇ ಒಂದು ಖರೀದಿ ಮಾಡಲು ಅಥವಾ ದೊಡ್ಡದಾದ ಕೆಲಸ ಕಾರ್ಯಗಳನ್ನು ಮಾಡಲು ರೈತರ ಬಳಿ ಒಮ್ಮೆ ಹಣ ಇರುವುದಿಲ್ಲ ಅಂತಹ ಸಮಯದಲ್ಲಿ ನೀವು ಸಾಲದ ರೂಪದಲ್ಲಿ ತೆಗೆದುಕೊಂಡು ನೀವು ನಿಮ್ಮ ಕೆಲಸ ಕಾರ್ಯಗಳು ಈ ಹಣವನ್ನು ಬಳಸಬಹುದು ಹಣವನ್ನು ಒಳ್ಳೆಯ ಕೆಲಸಕ್ಕಾಗಿ ಬಳಸಿದರೆ ಯಾವುದೇ ರೀತಿ ಎಷ್ಟೇ ಸಲ ತೆಗೆದರೂ ಸಹ ಅದರಲ್ಲಿ ಯಾವುದೇ ರೀತಿಯ ತಪ್ಪಿರುವುದಿಲ್ಲ ಹೀಗಾಗಿ ಇನ್ನಿತರ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಮಾಹಿತಿ ತೆಗೆದುಕೊಳ್ಳಿ.