ನವದೆಹಲಿ : ಪಹಲ್ಗಾಮ್ ಮೇಲೆ ಭಯೋತ್ಪಾದಕರು ಮಾಡಿದ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು, 100 ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ.
ಆಪರೇಷನ್ ಸಿಂಧೂರ್ ಎನ್ನುವ ಹೆಸರು ಭಾರತೀಯರೇ ಹೆಮ್ಮೆ ಪಡುವಂತೆ ಮಾಡಿದೆ. ಪಹಲ್ಗಾಮ್ ದಾಳಿಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡು ಕಣ್ಣೀರಿಟ್ಟ ಭಾರತೀಯರ ಕಣ್ಣೀರಿಗೆ ನ್ಯಾಯ ಸಿಕ್ಕಿದೆ.ನಡುರಾತ್ರಿ ಉಗ್ರರ 9 ನೆಲೆಗಳ ಮೇಲೆ ಭಾರತ ಭೀಕರವಾಗಿ ದಾಳಿ ನಡೆಸಿದೆ.
ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಟ್ಯಾಕ್ ಮಾಡಿದೆ. ಸಿಂಧೂರ ಎನ್ನುವ ಅರ್ಥಪೂರ್ಣ ಪದವನ್ನೇ ಈ ಆಪರೇಷನ್ಗೆ ಇಡಲಾಗಿದೆ. ಇದನ್ನು ಕೇಳಿದವರೆಲ್ಲ ಎಂಥಾ ಅರ್ಥಪೂರ್ಣ ಹೆಸರು ಎಂದು ಹೊಗಳಿದ್ದಾರೆ.ಸಿಂಧೂರ ಎಂಬ ಪದವು ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ, ರಕ್ಷಣೆ, ಸಮೃದ್ಧಿ, ಸೌಭಾಗ್ಯ, ಶಕ್ತಿ ದೇವತೆ ಪಾರ್ವತಿ, ದುರ್ಗಾ ಶಕ್ತಿಯ ಸಂಕೇತವಾಗಿದೆ. ಭಾರತೀಯ ಸೇನೆಯ ಧೈರ್ಯ, ತ್ಯಾಗ, ಶೌರ್ಯ ಮತ್ತು ದೇಶವನ್ನು ರಕ್ಷಿಸುವ ಸಂಕಲ್ಪವನ್ನು ಸೂಚ್ಯವಾಗಿ ತಿಳಿಸುತ್ತದೆ.
ಇದು ಜೀವನ ಮತ್ತು ಬಲಿದಾನದೊಂದಿಗೆ ಸಂಬಂಧ ಹೊಂದಿದೆ. ಸಿಂಧೂರವು ಕೇವಲ ಒಂದು ವಸ್ತುವಲ್ಲ, ಭಾರತೀಯ ಸಂಸ್ಕೃತಿಯಲ್ಲಿ ಆಳವಾದ ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಮೌಲ್ಯವನ್ನು ಹೊಂದಿದೆ. ಈ ಹೆಸರಿನ ಹಿಂದಿನ ಮಾಸ್ಟರ್ ಮೈಂಡ್ ಯಾರು? ಈ ಹೆಸರನ್ನೇ ಆಪರೇಷನ್ಗೆ ಕೊಟ್ಟಿದ್ಯಾರು? ಮತ್ತಿನ್ಯಾರೂ ಅಲ್ಲ. ಇದರ ಹಿಂದಿನ ಮಾಸ್ಟರ್ ಮೈಂಡ್ ಪ್ರಧಾನಿ ನರೇಂದ್ರ ಮೋದಿ.
ಎಲ್ಲರ ಸ್ಟೇಟಸ್, ಸ್ಟೋರಿಗಳಲ್ಲಿ ಸದ್ಯ ಇದೇ ಫೋಟೋ ಕಾಣಿಸಿಕೊಳ್ಳುತ್ತಿದ್ದು ಎಲ್ಲಾ ಕಡೆ ಶೇರ್ ಆಗಿದೆ. ಆಪರೇಷನ್ ಸಿಂಧೂರ್ ಸದ್ಯ ಭಾರತದಾದ್ಯಂತ ಟ್ರೆಂಡ್ ಆಗಿದೆ. ವಧುವಿನ ಹಣೆಯ ಮೇಲೆ ಕುಂಕುಮದ ಪುಡಿಯ ಒಂದು ಚಿಟಿಕೆ ಹಚ್ಚುವುದು ಆಕೆಯ ಪತಿಯ ಜೀವನವನ್ನು ಗುರುತಿಸುತ್ತದೆ. ಇದು ಮಹಿಳೆ ವಿವಾಹಿತಳಾಗಿದ್ದು, ಆಕೆಯ ಪತಿ ಜೀವಂತವಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ.
ವಿವಾಹಿತ ಹಿಂದೂ ಮಹಿಳೆಯರ ಜೀವನದಲ್ಲಿ ಇದು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಕೆಲವು ಸಂಪ್ರದಾಯಗಳಲ್ಲಿ, ಸಿಂಧೂರವು ಪಾರ್ವತಿ ದೇವಿಗೆ ಸಂಬಂಧಿಸಿದೆ, ಅವರನ್ನು ವೈವಾಹಿಕ ಭಕ್ತಿಯ ಸಾರಾಂಶವೆಂದು ಪರಿಗಣಿಸಲಾಗುತ್ತದೆ. ಸಿಂಧೂರ ಅಥವಾ ಕುಂಕುಮ ಕೂಡ ಯೋಧನ ಗುರುತು.