ಬೆಂಗಳೂರು: ರಾಜ್ಯದ ಎಲ್ಲಾ ಮಲ್ಟಿಫ್ಲೆಕ್ಸ್‍ಗಳಲ್ಲಿ ಸಿನಿಮಾ ಟಿಕೆಟ್‍ಗಳ ಮೇಲೆ ವಿಧಿಸಿದ್ದ 200 ರೂ.ಗಳ ದರ ಮಿತಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ಮುಂದುವರಿಸಿದೆ.
ಪ್ರಮುಖವಾಗಿ ಟಿಕೆಟ್ ಮಾರಾಟದ ದಿನಾಂಕ, ಸಮಯ, ಆನ್‌ಲೈನ್ ಅಥವಾ ಭೌತಿಕ ಕೌಂಟರ್‌ಗಳ ಮೂಲಕ ಟಿಕೆಟ್ ಮಾರಾಟದ ವಿವರ, ಕ್ರೆಡಿಟ್/ಡೆಬಿಟ್ ಕಾರ್ಡ್, ಯುಪಿಐ ನೆಟ್ ಬ್ಯಾಂಕಿಂಗ್ ಅಥವಾ ನಗದು ಪಾವತಿ ವಿವರ, ಸಂಗ್ರಹಿಸಿದ ಮೊತ್ತ, ಜಿಎಸ್‌ಟಿ ಮೊತ್ತ ಸೇರಿ ಸಮಗ್ರ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು.
ಎಲ್ಲ ನಗದು ವಹಿವಾಟುಗಳಿಗೆ ಡಿಜಿಟಲ್ ಆಗಿ ಪತ್ತೆ ಹಚ್ಚಬಹುದಾದ ರಸೀದಿಗಳನ್ನು ನೀಡಬೇಕು ಮತ್ತು ಪ್ರತಿದಿನ ನಗದು ರಿಜಿಸ್ಟರ್‌ಗಳನ್ನು ಮಲ್ಟಿಪ್ಲೆಕ್ಸ್‌ನ ವ್ಯವಸ್ಥಾಪಕರು ಸಹಿ ಮಾಡಬೇಕು. ಒಂದು ವೇಳೆ ಹೈಕೋರ್ಟ್ ಅಂತಿಮ ತೀರ್ಪು ಸರ್ಕಾರದ ಪರ ಬಂದರೆ, ಮಲ್ಟಿಪ್ಲೆಕ್ಸ್ ಗಳು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಸಂಗ್ರಹಿಸಿದ ಎಲ್ಲ ಮೊತ್ತವನ್ನು ಟಿಕೆಟ್‌ಗಳನ್ನು ಬುಕ್ ಮಾಡಿದ ಗ್ರಾಹಕರಿಗೆ ಬುಕ್ಕಿಂಗ್‌ಗೆ ಬಳಸಿದ ಪಾವತಿ ವಿಧಾನದ ಮೂಲಕವೇ ಮರುಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.
ಸಿನಿಮಾಗಳಿಗೆ ಗರಿಷ್ಠ 200 ರೂ. ಟಿಕೆಟ್ ದರ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೆ ಹೈಕೋರ್ಟ್ ತಡೆ ನೀಡಿ ವಿಚಾರಣೆ ನಡೆಸುತ್ತಿದೆ. ಒಂದು ವೇಳೆ ವಿಚಾರಣೆ ಪೂರ್ಣಗೊಂಡ ಬಳಿಕ ಸರ್ಕಾರದ ಆದೇಶ ಸರಿ ಎಂದು ಹೈಕೋರ್ಟ್ ಹೇಳಿದರೆ, ಸಿನಿಮಾ ಮಂದಿರಗಳು/ ಮಲ್ಟಪ್ಲೆಕ್ಸ್‌ಗಳು 200 ರೂಪಾಯಿಗಿಂತ ಹೆಚ್ಚಿನ ದರ ಪಡೆದ ನೀಡಿದ ಟಿಕೆಟ್ ಪಡೆದವರಿಗೆ ಹಣ ವಾಪಸ್ ನೀಡಬೇಕಿದೆ.