ಅಫ್ಘಾನಿಸ್ತಾನ: ಇಂಟರ್ನ್ಯಾಷನಲ್ ಗೇಮ್ ಚೆಸ್ ಅನ್ನು ಅಫ್ಘಾನಿಸ್ತಾನ ನಿಷೇಧಿಸಿದೆ. ಇದು ಯುವ ಜನತೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ.
ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಮಿಕ್ ಆಟಗಾರರಿಗೂ ಪೆಟ್ಟು ಬಿದ್ದಂತಾಗುತ್ತೆ ಅನ್ನೋ ಆಕ್ರೋಶಗಳು ಕೇಳಿ ಬಂದಿವೆ. ಚದುರಂಗ ಅನ್ನೋದು ಇಸ್ಲಾಮಿಕ್ನ ಷರಿಯಾಗೆ ವಿರುದ್ಧವಾಗಿದೆ ಅನ್ನೋ ಸಮಜಾಯಿಷಿ ಕೇಳಿ ಬರ್ತಿದೆ.
ಹಾಗಾಗಿ ಷರಿಯಾ ಕಾನೂನಿನಡಿಯಲ್ಲಿ ಚೆಸ್ ಅನ್ನ ನಿಷೇಧಿಸಲಾಗಿದೆ.ಚೆಸ್ ನಿಷೇಧದಿಂದ ಅಫ್ಘಾನಿಸ್ತಾನದ ಆಟಗಾರರ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
ಅಷ್ಟೇಯಲ್ಲದೇ ಇತ್ತೀಚಿನ ದಿನಗಳಲ್ಲಿ ಆ ದೇಶದ ಯುವಕರಿಗೆ ಹೆಚ್ಚಿನ ಚಟುವಟಿಕೆಗಳಿಲ್ಲದ ಕಾರಣ, ಅಲ್ಲಿನ ಕೆಫೆಗಳಲ್ಲಿ ಅವರಿಗೆ ಚೆಸ್ ಅಚ್ಚುಮೆಚ್ಚಿನ ಆಟವಾಗಿದೆ.
ಅಷ್ಟೇ ಅಲ್ಲದೇ ಚೆಸ್ ಅನ್ನ ಜೂಜಾಟದ ಒಂದು ರೂಪ ಎಂದು ಬಣ್ಣಿಸಲಾಗಿದೆ. ಇದೇ ಕಳವಳವನ್ನ ಉಲ್ಲೇಖಿಸಿ, ಅಫ್ಘಾನಿಸ್ತಾನದ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಿನ ವ್ಯಾಖ್ಯಾನದ ಅಡಿಯಲ್ಲಿ ಚೆಸ್ ಕಾನೂನುಬಾಹಿರ ಎಂದು ಪರಿಗಣಿಸಿ, ಕ್ರೀಡಾ ಅಧಿಕಾರಿಯೊಬ್ಬರು ಚೆಸ್ ನಿಷೇಧವನ್ನ ದೃಢಪಡಿಸಿದ್ದಾರೆ.