ಪಾಟ್ನಾ: ಬಿಹಾರದ 6 ಜಿಲ್ಲೆಗಳಲ್ಲಿ ಎದೆಹಾಲಿನಲ್ಲಿ ಯುರೇನಿಯಂ ಪತ್ತೆಯಾಗಿದೆ. ವೈದ್ಯಕೀಯ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ನವದೆಹಲಿಯ ಏಮ್ಸ್ ಸಹಯೋಗದಲ್ಲಿ ಪಾಟ್ನಾದ ಮಹಾವೀರ ಕ್ಯಾನ್ಸರ್ ಸಂಸ್ಥಾನವು ಜೀವರಸಾಯನಶಾಸ್ತ್ರ ವಿಭಾಗದ ಡಾ. ಅಶೋಕ್ ಶರ್ಮಾ ಅವರ ನೇತೃತ್ವದಲ್ಲಿ ಸಂಶೋಧನೆ ನಡೆಸಿತ್ತು.
ಡಾ. ಅರುಣ್ ಕುಮಾರ್ ಮತ್ತು ಪ್ರೊ. ಅಶೋಕ್ ಘೋಷ್ ಅವರು ತಂಡದಲ್ಲಿದ್ದರು. ಎದೆ ಹಾಲಿನಲ್ಲಿ ಯುರೇನಿಯಂಗೆ ಯಾವುದೇ ಅನುಮತಿಸುವ ಮಿತಿಯಿಲ್ಲ. ಸುಮಾರು 70% ಶಿಶುಗಳು ಸಂಭಾವ್ಯವಲ್ಲದ ಕಾರ್ಸಿನೋಜೆನಿಕ್ ಆರೋಗ್ಯ ಸಮಸ್ಯೆ ಎದುರಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ ತಜ್ಞರು ತಿಳಿಸಿದ್ದಾರೆ. ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯೂ ಕಾರಣವನ್ನು ತನಿಖೆ ಮಾಡುತ್ತಿದೆ.
40 ಮಾದರಿಗೆ ಸಂಗ್ರಹಿಸಲಾದ ಎಲ್ಲಾಎದೆಹಾಲಲ್ಲೂ ಯುರೇನಿಯಂ – 238 ಕಣಗಳು ಪತ್ತೆಯಾಗಿವೆ. ಇಂಥ ಹಾಲು ಕುಡಿದ ಶೇ.70ರಷ್ಟು ಮಕ್ಕಳು ಕ್ಯಾನ್ಸರ್ ಹೊರತಾದ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗಬಹುದು. ಮಕ್ಕಳಲ್ಲಿ ಕಿಡ್ನಿ, ನರರೋಗ ಮತ್ತಿತರೆ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಇಂಥ ಅಪಾಯ ತಾಯಿಗಿಂತ ಮಕ್ಕಳಲ್ಲೇ ಹೆಚ್ಚು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಹಾರ ಈ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಅಂತರ್ಜಲವೇ ಮೂಲ. ಅಲ್ಲಿಯ ಭೂಮಿಯಲ್ಲಿ ಮೇಲ್ಮಟ್ಟದಲೇ ಹೆಚಿನ ಯುರೇನಿಯಂ ಅಂಶ ಕಂಡುಬರುತ್ತದೆ. ಅ ನೀರು, ಅದರಲ್ಲಿ ಬೆಳೆದ ಆಹಾರ ಸೇರಿಸುವ ಕಾರಣ ತಾಯಂದಿರ ದೇಹಕ್ಕೆ ಯುರೇನಿಯಂ ಸೇರ್ಪಡೆಯಾಗುತ್ತಿದೆ. ಜೊತೆಗೆ ಗಾಳಿಯಿಂದಲೂ ಯುರೇನಿಯಂ ಕಣಗಳು ದೇಹವನ್ನು ಸೇರುತ್ತಿದೆ. ಕೊನೆಗೆ ಅದು ಎದೆಹಾಲಿನ ಭಾಗವಾಗಿ ಮಗುವಿನ ದೇಹಕ್ಕೂ ಸೇರುತ್ತದೆ. ಭೋಜ್ಪುರ, ಖಗಾರಿಯಾ, ಕಟಿಹಾರ್ ಮತ್ತು ನಳಂದ ಜಿಲ್ಲೆಗಳಲ್ಲಿ ನಡೆಸಿದ ಸಂಶೋಧನೆ ವೇಳೆ ಈ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ.
































