ಚಿತ್ರದುರ್ಗ: ಕರ್ನಾಟಕ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿಗೆ ತೊಗರಿ ಖರೀದಿ ಮಾಡಲು ಜಿಲ್ಲೆಯಾದ್ಯಂತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ಗೆ ರೂ.8,000 ಬೆಂಬಲ ನಿಗದಿ ಮಾಡಿದೆ. ರೈತರಿಂದ ಪ್ರತಿ ಎಕರೆಗೆ 4 ಕ್ವಿಂಟಾಲ್ನಂತೆ ತೊಗರಿ ಖರೀದಿ ಮಾಡಲು ಜಿಲ್ಲಾ ಟಾಸ್ಕ್ ಫೋರ್ಸ್ನಲ್ಲಿ ತೀರ್ಮಾನಿಸಲಾಗಿದೆ. ಚಿತ್ರದುರ್ಗ ನಗರದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ “ಓಂಈಇಆ” ಸಂಸ್ಥೆಯ ಪರವಾಗಿ ತೋಗರಿ ಖರೀದಿಸಲಿದೆ.
ಚಳ್ಳಕೆರೆ ತಾಲ್ಲೂಕಿನ ರಾಮಜೋಗಿಹಳ್ಳಿ, ಚಿಕ್ಕಮದುರೆ, ಮೀರಸಾಬಿಹಳ್ಳಿ ಪಿ.ಎ.ಸಿ.ಎಸ್, ಚಳ್ಳಕೆರೆಯ ಚಲುಮೆರುದ್ರಸ್ವಾಮಿ ರೈತ ಉತ್ಪಾದಕ ಕೇಂದ್ರ, ಹಿರಿಯೂರಿನ ಎ.ಪಿ.ಎಂ.ಸಿಯಲ್ಲಿರುವ ಈಶ ರೈತ ಉತ್ಪಾದಕ ಕೇಂದ್ರ, ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಪಿ.ಎ.ಸಿ.ಎಸ್, ತುರುವನೂರಿನ ಶ್ರೀ ಮಂಜುನಾಥಸ್ವಾಮಿ ರೈತ ಉತ್ಪಾದಕ ಕೇಂದ್ರ, ಚಿತ್ರದುರ್ಗ ನಗರದ ಟೌನ್ ಸಹಕಾರ ಸಂಘ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಕೊಂಡ್ಲಹಳ್ಳಿ ಬೀಳಿನೀರು ಚಿಲುಮೆ ಕೃಷಿ ಮತ್ತು ರೇಷ್ಮೆ ರೈತ ಉತ್ಪಾದಕರ ಕಂಪನಿ, ಮೊಳಕಾಲ್ಮೂರು ಪಟ್ಟಣ ಸಹಕಾರ ಸಂಘದಲ್ಲಿ ತೋಗರಿ ಬೇಳೆ ಖರೀದಿಸಲಾಗುವುದು.
ತೊಗರಿ ಖರೀದಿ ನೋಂದಣಿಗೆ ಅವಕಾಶವಿದ್ದು, ರೈತರು ಆಧಾರ್ ಕಾರ್ಡ್ನೊಂದಿಗೆ ಬಯೋಮೆಟ್ರಿಕ್ ಮೂಲಕ ನೋಂದಾಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ರಾಮಜೋಗಿಹಳ್ಳಿ-9741392578), ಚಿಕ್ಕಮದುರೆ-6362928198, ಮೀರಸಾಬಿಹಳ್ಳಿ-9686153879, ಚಳ್ಳಕೆರೆ-8217399538, ಹಿರಿಯೂರು-9535196763, ಚಿಕ್ಕಗೊಂಡನಹಳ್ಳಿ-6362187408, ತುರುವನೂರು-9620266826, ಚಿತ್ರದುರ್ಗ-8904308894, ಕೊಂಡ್ಲಹಳ್ಳಿ-9901939348 ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಕರೆ ಮಾಡಬಹುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಚಿತ್ರದುರ್ಗ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.
































