ಧಾರವಾಡ: ಸಿಎಂ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ರಾಜಕೀಯ ಪುಡಾರಿ ಅಂತ ಕರೆದಿದ್ದನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಕಿಡಿಕಾರಿದ್ದಾರೆ. ‘ಖರ್ಗೆ ಅವರು ಹೇಳಿದ್ದನ್ನು ಪ್ರಧಾನಿ ವಿಶ್ಲೇಷಣೆ ಮಾಡಿದ್ದಾರೆ, ಅದಕ್ಕೆ ಸೌಜನ್ಯಯುತವಾಗಿ ಪ್ರತಿಕ್ರಿಯೆ ಕೊಡುವ ಬದಲು ಸಿದ್ದರಾಮಯ್ಯ ಪ್ರಧಾನಿಯವರನ್ನು ಪುಡಾರಿ ಅಂತ ಕರೆದಿದ್ದಾರೆ, ಸಿದ್ದರಾಮಯ್ಯ ತಮ್ಮ ನಾಲಗೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.