ಭಾರತದಲ್ಲಿ ಮದುವೆಯ ಮೊದಲು ಮತ್ತು ನಂತರ ಅನೇಕ ಆಚರಣೆಗಳನ್ನು ನಡೆಸಲಾಗುತ್ತದೆ. ಈ ಆಚರಣೆಗಳಲ್ಲಿ, ಅರಿಶಿನ, ಪಾದರಕ್ಷೆಗಳನ್ನು ಮರೆಮಾಡುವುದು, ಉಂಗುರವನ್ನು ಹುಡುಕುವುದು ಸೇರಿ ಅನೇಕ ಆಚರಣೆಗಳಿವೆ.
ವಿದಾಯದಲ್ಲಿ, ವಧು ತನ್ನ ಕುಟುಂಬ ಸದಸ್ಯರನ್ನು ಭೇಟಿಯಾಗುತ್ತಾಳೆ ಮತ್ತು ತನ್ನ ವರನೊಂದಿಗೆ ಅತ್ತೆಯ ಮನೆಗೆ ಹೋಗುತ್ತಾಳೆ. ಇನ್ನೂ ಭಾರತದಲ್ಲಿ ದೈಹಿಕ ಮಿಲನ ಮಡಿವಂತಿಕೆಗಳಿಂದ ತುಂಬಿದೆ. ಹಾದಿ ತಪ್ಪಿದೆ ಅವರನ್ನು ಬೇರೆಯದ್ದೇ ದೃಷ್ಟಿಯಿಂದ ನೋಡಲಾಗುತ್ತದೆ. ಅದಕ್ಕೆ ಇಲ್ಲಿ ಮದುವೆ ಮತ್ತು ಮೊದಲ ರಾತ್ರಿಗೆ ವಿಶೇಷ ಪ್ರಾಮುಖ್ಯತೆಗಳನ್ನು ನೀಡಲಾಗಿದೆ. ಆದ್ರೆ ಇದೇ ಭಾರತದಲ್ಲಿ ಒಂದು ರಾಜ್ಯದಲ್ಲಿ ಮದುವೆಗೆ ಮುನ್ನವೇ ಎಲ್ಲರ ಒಪ್ಪಿಗೆಯೊಂದಿಗೆ ಮೊದಲ ರಾತ್ರಿ ನಡೆಯುತ್ತೆ.
ಮೊದಲ ರಾತ್ರಿ ಮುಗಿಸಿದ ನಂತರ ಜೋಡಿಗಳು ಹಸೆಮಣೆ ಏರುತ್ತಾರೆ. ನಿಮಗೆ ಆಶ್ಚರ್ಯವಾದರೂ ಕೂಡ ಇದು ಸತ್ಯ. ಇಂತಹದೊಂದು ಪರಂಪರೆ ಛತ್ತೀಸ್ಗಢದ ಬಸ್ತಾರದಲ್ಲಿ ನಡೆದುಕೊಂಡು ಬಂದಿದೆ. ಇಲ್ಲಿ ಮದುವೆಯಾಗುವ ಜೋಡಿಗಳು ಮೊದಲು ತಮ್ಮ ಮೊದಲ ರಾತ್ರಿಯಲ್ಲಿ ಮಿಲನೋತ್ಸವ ಆಚರಿಸಿಕೊಂಡೇ ಬರಬೇಕು. ಬಸ್ತರ್ನಲ್ಲಿ ಒಂದು ವಿಶೇಷವಾದ ಸಮುದಾಯವಿದೆ. ಈ ಒಂದು ಸಮುದಾಯದಲ್ಲಿ ಇಂತಹದೊಂದು ಪರಂಪರೆ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ.
ಇಲ್ಲಿ ಮದುವೆಗೆ ಮುನ್ನ ಪ್ರೀತಿ ಮಾಡಲು ಹಾಗೂ ಮೊದಲ ರಾತ್ರಿ ಮುಗಿಸಿಕೊಂಡು ಬರಲು ಸಮುದಾಯದ ಹಿರಿಯರು ಹಾಗೂ ಗಂಡು ಹೆಣ್ಣಿನ ಕಡೆಯವರು ಜೋಡಿಗೆ ಅವಕಾಶ ಮಾಡಿ ಕೊಡುತ್ತಾರೆ. ಮತ್ತು ಅದು ಅತ್ಯಂತ ಅವಶ್ಯಕ ಎಂದು ಕೂಡ ಹೇಳುತ್ತಾರೆ. ಈ ಒಂದು ಪದ್ಧತಿಗೆ ಇಲ್ಲಿ ಗೋಟುಲು ಎಂದು ಹೆಸರು. ಈ ಗೋಟುಲು ಪರಂಪರೆಯನ್ನು ಅಲ್ಲಿಯ ಮದಿಯಾ ಎಂಬ ಆದಿವಾಸಿಗಳು ಪವಿತ್ರ ಹಾಗೂ ಲೈಂಗಿಕತೆಯ ಬಗ್ಗೆ ನೀಡುವ ಶಿಕ್ಷಣ ಎಂದು ಪರಿಭಾವಿಸುತ್ತಾರೆ.
ಇದರ ಮೂಲಗಳನ್ನು ಹುಡುಕಿಕೊಂಡು ಹೋದಾಗ ಈ ಒಂದು ಪದ್ಧತಿಯನ್ನು ಶುರು ಮಾಡಿದ್ದು ಲಿಂಗೋಪೆನ್ ಅಥವಾ ಲಿಂಗೋದೇವ ಎಂಬುವವರ ಶುರು ಮಾಡಿದರು ಎಂಬ ನಂಬಿಕೆ ಇದೆ.
ಇನ್ನು ಪ್ರಥಮ ರಾತ್ರಿ ಮುಗಿಸಿ ಮದುವೆಯಾದ ಬಳಿಕ ಗಂಡು ಮತ್ತು ಹೆಣ್ಣು ಇಬ್ಬರೂ ಕೂಡ ಹೆಸರನ್ನು ಬದಲಾಯಿಸಿಕೊಳ್ಳುವ ಪದ್ಧತಿಯೂ ಕೂಡ ಇದೆ