ಮಾರ್ಚ್ ಮಾಸಿಕ ರಾಶಿಫಲ ಯಾರಿಗೆ ಈ ತಿಂಗಳು ಧನಲಾಭ?
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮೇಷ ರಾಶಿ ಮಾರ್ಚ್ ತಿಂಗಳ ಆರಂಭವು ಮೇಷ ರಾಶಿಯವರಿಗೆ ಶುಭ ಮತ್ತು ಅದೃಷ್ಟವನ್ನು ತರುತ್ತದೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಸಾಮಾನ್ಯವಾಗಿ ಈ ತಿಂಗಳಲ್ಲಿ ನೀವು ಬಹಳಷ್ಟು ವಿಚಾರದಲ್ಲಿ ಸರಿಯಾದ ನಿರ್ಧಾರಗಳ ತೆಗೆದುಕೊಳ್ಳುವಿರಿ. ಆರ್ಥಿಕವಾಗಿ ಮಾರ್ಚ್ ಮೊದಲಾರ್ಧವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ನಿಮ್ಮ ಹಣಕಾಸು ವಿಚಾರವಾಗಿ ದೊಡ್ಡ ಲಾಭಗಳನ್ನು ನೋಡುವಿರಿ. ಬಹುಸಮಯದಿಂದ ಸಿಲುಕಿದ್ದ ಹಣ ನಿಮ್ಮ ಕೈಸೇರುವಂತಹ ತಿಂಗಳು ಇದಾಗುತ್ತಿದೆ. ಭೂಮಿ, ಮನೆ ಸಂಬಂಧಿತ ಖರೀದಿ ಮತ್ತು ಮಾರಾಟ ವಿಚಾರಗಳಲ್ಲಿ ಮುನ್ನಡೆಯಬಹುದು. ದೀರ್ಘಕಾಲದ ಅನಾರೋಗ್ಯ ವಿಚಾರವೊಂದು ಈ ತಿಂಗಳಿನಲ್ಲಿ ಪರಿಹಾರ ಪಡೆಯಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಮಾರ್ಚ್ ಅತ್ಯಂತ ಶುಭವಾಗಿರುತ್ತದೆ. ಆರಂಭದ ದಿನಗಳಲ್ಲಿ ಕೆಲವು ವಿಚಾರದಲ್ಲಿ ನಿಮಗೆ ಅಡ್ಡಿಗಳು ಎದುರಾಗಬಹುದು. ಅದರಲ್ಲೂ ಹೊಸ ಸಂಬಂಧಗಳು ಸರಿಯಾದ ದಿಕ್ಕಿನತ್ತ ದಾರಿ ಮಾಡಿಕೊಡದೆ ಇರಬಹುದು. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ. ದೇಶ ಮತ್ತು ವಿದೇಶಗಳಲ್ಲಿ ಹಿತೈಷಿಗಳ ಬೆಂಬಲ ಮತ್ತು ಸಹಕಾರವನ್ನು ನೀವು ಪಡೆಯುತ್ತೀರಿ. ನೀವು ನಿರುದ್ಯೋಗಿಗಳಾಗಿದ್ದರೆ ಈ ತಿಂಗಳು ನೀವು ಬಯಸಿದ ಕೆಲಸವನ್ನು ಪಡೆಯಲಿದ್ದೀರಿ. ಆರ್ಥಿಕ ಸಮಸ್ಯೆಗೆ ಕಾರಣವಾಗಿದ್ದ ವಿಚಾರವೊಂದರಿಂದ ನೀವು ಮುಕ್ತರಾಗುತ್ತೀರಿ. ಮಾರುಕಟ್ಟೆ, ಷೇರು, ಉಳಿತಾಯದ ವಿಚಾರದಲ್ಲಿ ಈ ತಿಂಗಳು ನಿಮಗೆ ಧನಾತ್ಮಕ ರೀತಿಯ ಪರಿಣಾಮಗಳ ತರಲಿದೆ. ದೇವಾಲಯ, ಪ್ರವಾಸದಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಶುಭ ಕಾರ್ಯಗಳ ಭೇಟಿ ನಿಮ್ಮಲ್ಲಿ ಹೊಸ ಸ್ನೇಹಿತರ ಸಂಪಾದನೆಗೆ ಕಾರಣವಾಗಲಿದೆ
ಮಿಥುನ ರಾಶಿ
ಮಾರ್ಚ್ನಲ್ಲಿ ಮಿಥುನ ರಾಶಿ ಜನರಿಗೆ ಶುಭದಾಯಕ ದಿನಗಳಿವೆ. ತಿಂಗಳ ಆರಂಭದಲ್ಲಿ ನೀವು ಮಾಡಬೇಕಿದ್ದ ಕೆಲಸಗಳ ಮುಂದೂಡುರಿವಿರಿ. ಮಾರ್ಚ್ ಆರಂಭದಲ್ಲಿ ಮಿಥುನ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರ ಪ್ರಗತಿಯ ಬಗ್ಗೆ ಚಿಂತಿತರಾಗುತ್ತಾರೆ. ತಿಂಗಳ ಮಧ್ಯಭಾಗದಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಎರಡನೇ ವಾರದಲ್ಲಿ ವೆಚ್ಚಗಳು ಆದಾಯವನ್ನು ಮೀರುತ್ತವೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡಲಿದ್ದಾರೆ. ತಿಂಗಳ ಅಂತ್ಯದಲ್ಲಿ ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ತಿಂಗಳ ಉತ್ತರಾರ್ಧವು ಮೊದಲಾರ್ಧಕ್ಕೆ ಹೋಲಿಸಿದರೆ ಸ್ವಲ್ಪ ಪರಿಹಾರವನ್ನು ನೀಡುತ್ತದೆ. ಆದಾಗ್ಯೂ ಯಾವುದೇ ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳುವುದು ನೆಮ್ಮದಿ ತರಲಿದೆ. ವಾಹನ ಲಾಭವಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕರ್ಕಾಟಕ ರಾಶಿ ಮಾರ್ಚ್ ತಿಂಗಳು ಕರ್ಕಾಟಕ ರಾಶಿಯವರಿಗೆ ಏರಿಳಿತಗಳಿಂದ ತುಂಬಿರುತ್ತದೆ. ತಿಂಗಳ ಆರಂಭದಿಂದ ನಿಮ್ಮ ಸಮಯ ಮತ್ತು ಹಣವನ್ನು ಎಚ್ಚರಿಕೆಯಿಂದ ನಿರ್ವಹಿಸಿ ಮತ್ತು ವ್ಯರ್ಥ ಖರ್ಚು ಮಾಡುವುದನ್ನು ತಪ್ಪಿಸಿ. ಮಾರ್ಚ್ನಲ್ಲಿ ಕರ್ಕಾಟಕ ರಾಶಿಯವರು ದೀರ್ಘಾವಧಿಯ ನಷ್ಟಗಳನ್ನು ಸರಿದೂಗಿಸಿಕೊಳ್ಳುವ ಅವಕಾಶ ಪಡೆಯಲಿದ್ದೀರಿ. ಐಷಾರಾಮಿ ವಸ್ತುಗಳಾದ ಚಿನ್ನ ಬೆಳ್ಳಿ, ಗೃಹೋಪಯೋಗಿ ವಸ್ತುಗಳ ಖರೀದಿಗೆ ಈ ತಿಂಗಳು ಸೂಕ್ತ ಸಮಯ ಆಗಿರಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗಬಹುದು. . ಈ ಅವಧಿಯಲ್ಲಿ, ನೀವು ನಿಮ್ಮ ಆರೋಗ್ಯ ಮತ್ತು ಸಂಬಂಧಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಈ ತಿಂಗಳು ಕುಟುಂಬ ಸಂತೋಷದ ವಿಷಯದಲ್ಲಿ ಮಧ್ಯಮ ಫಲಪ್ರದವಾಗಿರುತ್ತದೆ.
ಸಿಂಹ ರಾಶಿ ಮಾರ್ಚ್ ತಿಂಗಳು ಸಿಂಹ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ಈ ತಿಂಗಳು ನೀವು ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವುದನ್ನು ತಪ್ಪಿಸಬೇಕು. ತಿಂಗಳ ಆರಂಭದಿಂದ ನಿಮ್ಮ ಕೆಲಸದಲ್ಲಿನ ಅಡೆತಡೆಗಳು ಮತ್ತು ನಿಮ್ಮ ಪ್ರಯತ್ನಗಳಿಗೆ ಅನುಗುಣವಾಗಿ ಫಲಿತಾಂಶಗಳ ಅತೃಪ್ತಿಯೂ ಕಾಡಬಹುದು. ನಿರುದ್ಯೋಗಿಗಳಿಗೆ ಈ ತಿಂಗಳ ಮಧ್ಯ ಭಾಗದಲ್ಲಿ ಶುಭ ಸುದ್ದಿಗಳು ಬರಲಿದೆ. ಅವಿವಾಹಿತರಲ್ಲಿ ಹಣಕಾಸು ಕುರಿತಾದ ವಿಚಾರಗಳು ಶುಭ ಫಲಗಳನ್ನೇ ತರಲಿದೆ. ಮನಸ್ಸಿಗೆ ಇಷ್ಟವಾಗುವಂತಹ ಕೆಲಸಗಳನ್ನು ಮಾಡುವಿರಿ. ದೇವಾಲಯ ಭೇಟಿ, ಪ್ರವಾಸಗಳು, ಆಪ್ತರ ಭೇಟಿಯಂತಹ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಶುಭ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಲಿದೆ. ವ್ಯವಹಾರದ ದೃಷ್ಟಿಕೋನದಿಂದ ಇಡೀ ತಿಂಗಳು ಏರಿಳಿತಗಳಿಂದ ತುಂಬಿರುತ್ತದೆ. ಸ್ವಂತ ಉದ್ಯೋಗ ಆರಂಭಿಸಲು ಸೂಕ್ತ ಸಮಯವಲ್ಲ. ವಾಹನ ಖರೀದಿಗೆ ಶುಭ ಸಮಯ.
ಕನ್ಯಾ ರಾಶಿ ಮಾರ್ಚ್ ತಿಂಗಳ ಮೊದಲಾರ್ಧವು ಕನ್ಯಾ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ಮೊದಲ 15 ದಿನಗಳು ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಧಾನಗತಿ ನೋಡಬಹುದು. ಅವಿವಾಹಿತರಲ್ಲಿ ಹಣಕಾಸು ಸಂಬಂಧಿಸಿದಂತೆ ಒತ್ತಡ ಇರಲಿದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ ಮತ್ತು ನಿಯಮಗಳನ್ನು ಉಲ್ಲಂಘಿಸುವುದನ್ನು ತಪ್ಪಿಸಿ ಏಕೆಂದರೆ ಇದು ದೈಹಿಕ ಮತ್ತು ಮಾನಸಿಕ ತೊಂದರೆಗೆ ಕಾರಣವಾಗಬಹುದು. ತಿಂಗಳ ಮೊದಲಾರ್ಧದಲ್ಲಿ ಋತುಮಾನದ ಕಾಯಿಲೆಗಳು ದೈಹಿಕ ನೋವನ್ನು ಉಂಟುಮಾಡಬಹುದು. ಆದ್ದರಿಂದ, ಈ ಸಮಯದಲ್ಲಿ ಆರೋಗ್ಯಕರ ಆಹಾರ ಮತ್ತು ದೈನಂದಿನ ದಿನಚರಿಯನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯ ಮತ್ತು ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ತಿಂಗಳ ಅಂತ್ಯದಲ್ಲಿ ನಿಮ್ಮ ಸಾಲದ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ತುಲಾ ರಾಶಿ ಮಾರ್ಚ್ ತಿಂಗಳು ತುಲಾ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ವೃತ್ತಿ ಮತ್ತು ವ್ಯವಹಾರದ ದೃಷ್ಟಿಕೋನದಿಂದ ಮಾರ್ಚ್ ಮೊದಲಾರ್ಧವು ಕೆಲವು ಏರಿಳಿತಗಳ ಅವಧಿಯಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಕೆಲಸದ ವಾತಾವರಣದಲ್ಲಿ ಜಾಗರೈಕರಾಗಿರಿ. ತಿಂಗಳ 15 ದಿನಗಳ ಬಳಿಕ ನಿಮ್ಮ ಕೆಲಸಗಳಲ್ಲಿ ಸಕಾರಾತ್ಮಕ ಫಲಿತಾಂಶಗಳ ಬರಲಿದೆ. ಅನಿರೀಕ್ಷಿತ ಪ್ರಯಾಣಗಳಲ್ಲಿ ತೊಡಗುತ್ತೀರಿ. ಮನೆಯ ಐಷಾರಾಮಿ ವಸ್ತುವೊಂದು ದುರಸ್ಥಿಗರ ಒಳಗಾಗಬಹುದು. ವಾಹನ ಸಂಬಂಧವಾಗಿ ಖರ್ಚು ಮಾಡುವಿರಿ. ನೀವು ನಿರ್ದಿಷ್ಟ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಮಾರ್ಚ್ ಉತ್ತರಾರ್ಧದಲ್ಲಿ ನೀವು ಗಮನಾರ್ಹ ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕಾಗಬಹುದು. ನಿಮ್ಮ ಸಂಗಾತಿಯಿಂದ ನಿಮಗೆ ಅಚ್ಚರಿಯ ಉಡುಗೊರೆ ಸಿಗಬಹುದು.
ವೃಶ್ಚಿಕ ರಾಶಿ ಈ ತಿಂಗಳು ವೃಶ್ಚಿಕ ರಾಶಿಯವರಿಗೆ ಬಯಸಿದ್ದು ಸಿಗುವಂತಹ ತಿಂಗಳು ಎನ್ನಬಹುದು. ತಿಂಗಳ ಆರಂಭದಲ್ಲಿ ನಿಮಗೆ ಒಂದಿಷ್ಟು ಅಡ್ಡಿಗಳು ಎದುರಾಗಿದ್ದರೂ ಬಳಿಕ ನಿವರಣೆಯ ಮಾರ್ಗಗಳು ಸಿಗಲಿದೆ. ತಮ್ಮ ಯೋಜಿತ ಕಾರ್ಯಗಳನ್ನು ತಾಳ್ಮೆಯಿಂದ ಪೂರ್ಣಗೊಳಿಸಲು ಶ್ರಮಿಸಬೇಕು. ವ್ಯಾಪಾರಸ್ಥರು ಮಾರ್ಚ್ ಆರಂಭದಲ್ಲಿ ತಮ್ಮ ನಷ್ಟದ ದಿನವಾಗಿ ನೋಡಬಹುದು. ಆದ್ರೆ ತಿಂಗಳ ಅಂತ್ಯದಲ್ಲಿ ಶುಭವಿದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿದ್ದ ಮಂದಿಗೆ ಶುಭವಾಗಲಿದೆ. ನಿಮ್ಮ ವೃತ್ತಿ ಅಥವಾ ವ್ಯವಹಾರಕ್ಕಾಗಿ ನೀವು ದೀರ್ಘ ಅಥವಾ ಕಡಿಮೆ ದೂರ ಪ್ರಯಾಣಿಸಬೇಕಾಗಬಹುದು. ತಿಂಗಳ ಮಧ್ಯಭಾಗವು ನಿಮಗೆ ಆರ್ಥಿಕವಾಗಿ ಸಾಕಷ್ಟು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನೀವು ವಿವಿಧ ಮೂಲಗಳಿಂದ ಆದಾಯವನ್ನು ಪಡೆಯುತ್ತೀರಿ. ಹೊಸ ವ್ಯವಹಾರಗಳು ಕೈ ಹಿಡಿಯಲಿದೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗೆ ಈ ತಿಂಗಳು ಪ್ರಮುಖ ದಿನಗಳಿವೆ.
ಧನು ರಾಶಿ ಮಾರ್ಚ್ ತಿಂಗಳು ಧನು ರಾಶಿಯ ಜನರಿಗೆ ಗಮನಾರ್ಹ ಫಲಿತಾಂಶಗಳ ದಿನಗಳಿವೆ. ತಿಂಗಳ ಆರಂಭವೂ ಒಂದಿಷ್ಟು ಬಿಕ್ಕಟ್ಟುಗಳಿಂದ ತುಂಬಿರಬಹುದು. ಅದ್ರಲ್ಲೂ ದಾಂಪತ್ಯ, ಹಣಕಾಸು ವಿಚಾರಗಳಲ್ಲಿ ಗೊಂದಲ, ಬಿಕ್ಟಟ್ಟು ತಲೆದೂರಬಹುದು. ಆದ್ರೆ ತಿಂಗಳ ಕೊನೆಯ ಭಾಗದಲ್ಲಿ ನೀವು ಅಂದುಕೊಂಡ ಕೆಲಸಗಳ ಮಾಡಿ ಮುಗಿಸುವ ಮೂಲಕ ನೆಮ್ಮದಿ ಹುಡುಕಬಹುದು. ಪ್ರಯಾಣಗಳಲ್ಲಿ ಹೆಚ್ಚು ದಿನ ಕಳೆಯುತ್ತೀರಿ. ವ್ಯಾಪಾರ ಪ್ರಯಾಣವು ಆಹ್ಲಾದಕರ ಮತ್ತು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಅಧಿಕಾರ ಮತ್ ಹುದ್ದೆ ಸಂಬಂಧಿತ ವ್ಯಕ್ತಿಗಳಿಗೆ ಬಯಸಿದ್ದನ್ನು ಪಡೆಯುವ ಸಮಯ. ಗೃಹಿಣಿಯರ ಅನಾರೋಗ್ಯ ವಿಚಾರಗಳು ಈ ತಿಂಗಳು ನಿವಾರಣೆಯಾಗಲಿದೆ. ತಿಂಗಳ ಕೊನೆಯಲ್ಲಿ ವಿವಿಧ ಮೂಲಗಳಿಂದ ಆರ್ಥಿಕ ಲಾಭವನ್ನು ಪಡೆಯಬಹುದು. ಸಂಬಂಧಗಳ ವಿಷಯದಲ್ಲಿ ಈ ತಿಂಗಳು ನಿಮಗೆ ಮಧ್ಯಮ ಫಲಪ್ರದವಾಗಿರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮಕರ ರಾಶಿ ಮಾರ್ಚ್ ಮಕರ ರಾಶಿಯವರಿಗೆ ಈ ತಿಂಗಳು ಹಲವು ಕಾರ್ಯಗಳು ಕೈಗೂಡುವ ಸಮಯ. ಮನೆ ವಿಚಾರವಾಗಿ ನೀವು ಮಾಡಬೇಕಿದ್ದ ಕೆಲಸಗಳನ್ನ ಮಾಡಿ ಮುಗಿಸಲು ಇದು ಸೂಕ್ತ ಸಮಯ ಆಗಿರಲಿದೆ. ನಿಮ್ಮ ಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಹೆಚ್ಚುವರಿ ಪ್ರಯತ್ನ ಮತ್ತು ಕಠಿಣ ಪರಿಶ್ರಮವನ್ನು ಮಾಡಬೇಕಾಗುತ್ತದೆ. ತಿಂಗಳ ಮೊದಲಾರ್ಧದಿಂದ ಪ್ರಾರಂಭವಾಗುವ ಹೆಚ್ಚುವರಿ ಕೆಲಸದ ಹೊರೆ ನಿಮ್ಮ ಮೇಲೆ ಬೀಳುತ್ತದೆ. ತಿಂಗಳಾದ್ಯಂತ ಕೆಲಸದ ಒತ್ತಡ ಇರುತ್ತದೆ. ಕೆಲಸದ ಸ್ಥಳ ಅಥವಾ ವ್ಯವಹಾರದಲ್ಲಿ ಇತರರನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ. ವ್ಯಾಪಾರಸ್ಥರು ತೆರಿಗೆ ಸಂಬಂಧಿಸಿದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಹಿತ ಶತ್ರುಗಳ ಕುರಿತಾಗಿ ಎಚ್ಚರಿಕೆ ಇಡಿ. ವಾಹನ ಸಂಬಂಧಿತ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಮಕ್ಕಳ ಆರೋಗ್ಯ ಸಂಬಂಧ ಸಮಸ್ಯೆ ದೊಡ್ಡದಾಗಲು ಬಿಡಬೇಡಿ.
ಕುಂಭ ರಾಶಿ ಮಾರ್ಚ್ ತಿಂಗಳ ಉತ್ತರಾರ್ಧದಲ್ಲಿ ಕುಂಭ ರಾಶಿ ಜನರಿಗೆ ಮಿಶ್ರಫಲಗಳ ನೋಡಬಹುದು. ನೀವು ಹೆಚ್ಚು ಪ್ರಾಮಾಣಿಕ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿ ಶ್ರಮಿಸಿದರೆ, ನಿಮಗೆ ಹೆಚ್ಚು ಪ್ರತಿಫಲ ಸಿಗುತ್ತದೆ. ನಿರುದ್ಯೋಗಿಗಳು ಸ್ನೇಹಿತ ಅಥವಾ ಪ್ರಭಾವಿ ವ್ಯಕ್ತಿಯ ಸಹಾಯದಿಂದ ಬಯಸಿದ ಕೆಲಸವನ್ನು ಪಡೆಯಬಹುದು. ಈಗಾಗಲೇ ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚಿನ ಗೌರವವನ್ನು ಅನುಭವಿಸುತ್ತಾರೆ. ನೀವು ಮೇಲಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ ಮತ್ತು ಗುರಿಗಳು ಮತ್ತು ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಸಾಧಿಸಲಾಗುತ್ತದೆ. ನ್ಯಾಯಾಲಯ ಸಂಬಂಧಿತ ಕಲಹಗಳು ಬಗೆಹರಿಯುವ ಸಾಧ್ಯತೆಗಳಿವೆ. ಶುಭ ಕಾರ್ಯ ಸಂಬಂಧಿತ ವಿಚಾರಗಳಲ್ಲಿ ಶುಭವಾಗಲಿದೆ.
ಮೀನ ರಾಶಿ ಮಾರ್ಚ್ ತಿಂಗಳು ಮೀನ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ಈ ತಿಂಗಳು ನಿಮ್ಮ ಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಪ್ರಯತ್ನ ಮತ್ತು ಶ್ರದ್ಧೆಯ ಅಗತ್ಯವಿರುತ್ತದೆ. ತಿಂಗಳ ಆರಂಭದಲ್ಲಿ ನೀವು ಕೆಲಸದ ನಿಮಿತ್ತ ದೂರದ ಪ್ರಯಾಣ ಮಾಡಬೇಕಾಗಬಹುದು. ಉದ್ಯೋಗದಲ್ಲಿರುವವರು ಈ ಅವಧಿಯಲ್ಲಿ ಅನಿರೀಕ್ಷಿತ ವರ್ಗಾವಣೆಯನ್ನು ಎದುರಿಸಬೇಕಾಗುತ್ತದೆ. ವ್ಯಾಪಾರದಲ್ಲಿರುವವರಿಗೆ ಮಾರ್ಚ್ ಮಿಶ್ರ ತಿಂಗಳು ಆಗಿರುತ್ತದೆ. ತಿಂಗಳ ಮೊದಲಾರ್ಧದಲ್ಲಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭದ ಕೊರತೆಯಿಂದಾಗಿ ನೀವು ನಿರಾಶೆಗೊಳ್ಳಬಹುದು. ಈ ಸಮಯದಲ್ಲಿ ಮಾರುಕಟ್ಟೆ ಸಂಬಂಧಿತ ವಿಚಾರಗಳಲ್ಲಿ ಸುಧಾರಿತ ಫಲಿತಾಂಶ ಸಿಗಲಿದೆ
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882































