ಮನೆಯಲ್ಲಿ ವೈ-ಫೈ ಇದ್ರೂ ಚೆನ್ನಾಗಿ ಸಿಗ್ನಲ್ ಸಿಗ್ತಿಲ್ಲ ಅನ್ನೋ ಪ್ರಾಬ್ಲಮ್ ಎಲ್ಲರಿಗೂ ಇರುತ್ತೆ. ಆದ್ರೆ ಈ ಕೆಲವು ವಿಷ್ಯಗಳನ್ನ ಗಮನಿಸಿದ್ರೆ ನಿಮ್ಮ ವೈ-ಫೈ ಸ್ಪೀಡ್ ಚೆನ್ನಾಗಿ ಸಿಗಬಹುದು.
ನಿಮ್ಮ ವೈ-ಫೈ ರೂಟರ್ ದೊಡ್ಡ ಕನ್ನಡಿ ಹತ್ರ ಇದ್ರೆ ತಕ್ಷಣ ಬೇರೆಡೆಗೆ ಸರಿಸಿ. ಸಿಗ್ನಲ್‌ಗಳು ಎದುರು ದಿಕ್ಕಿಗೆ ಹೋಗಿ ನೆಟ್‌ವರ್ಕ್ ವ್ಯಾಪ್ತಿ ಕಡಿಮೆಯಾಗುತ್ತೆ. ಲೋಹದ ವಸ್ತುಗಳನ್ನೂ ವೈ-ಫೈಯಿಂದ ದೂರ ಇಡಿ, ಅವು ಸಿಗ್ನಲ್‌ಗಳನ್ನ ದುರ್ಬಲಗೊಳಿಸುತ್ತೆ. ಲೋಹ ವಿದ್ಯುತ್‌ಗೆ ಒಳ್ಳೆ ಕಂಡಕ್ಟರ್ ಆದ್ರೆ ರೇಡಿಯೋ ತರಂಗಗಳನ್ನ ತಡೆಯುತ್ತೆ. ನಿಮ್ಮ ರೂಟರ್ ಹತ್ರ ಲೋಹದ ವಸ್ತುಗಳಿದ್ರೆ ಸಿಗ್ನಲ್ ಹೋಗೋದಕ್ಕೆ ತೊಂದರೆಯಾಗುತ್ತೆ.
ಗ್ಲಾಸ್ ಅಥವಾ ಲೋಹ ಇಲ್ಲದ ಜಾಗದಲ್ಲಿ ರೂಟರ್ ಇಡಿ. ಕಂಪ್ಯೂಟರ್, ಬ್ಲೂಟೂತ್ ಸ್ಪೀಕರ್, ಕೀಬೋರ್ಡ್, ಮೌಸ್ ಇತ್ಯಾದಿಗಳನ್ನ ರೂಟರ್ ಹತ್ರ ಇಡೋರು ತುಂಬಾ ಜನ ಇರ್ತಾರೆ. ಆದ್ರೆ ವೈ-ಫೈ ಮತ್ತು ಬ್ಲೂಟೂತ್ 2.4 GHz ಫ್ರೀಕ್ವೆನ್ಸಿಲಿ ಕೆಲಸ ಮಾಡುತ್ತೆ. ಈ ಡಿವೈಸ್‌ಗಳು ರೂಟರ್‌ಗೆ ತುಂಬಾ ಹತ್ರ ಇದ್ರೆ ವೈ-ಫೈ ಸಿಗ್ನಲ್‌ಗೆ ತೊಂದರೆಯಾಗುತ್ತೆ. ಹಾಗಾಗಿ ರೂಟರ್ ಹತ್ರ ಬ್ಲೂಟೂತ್ ಡಿವೈಸ್‌ಗಳನ್ನ ಇಡಬೇಡಿ. ದೊಡ್ಡ ಮರದ ಫರ್ನಿಚರ್‌ಗಳು ನಿಮ್ಮ ವೈ-ಫೈ ನೆಟ್‌ವರ್ಕ್‌ಗೆ ತೊಂದರೆ ಕೊಡಬಹುದು.
ನಿಮ್ಮ ರೂಟರ್ ಮರದ ರ್ಯಾಕ್ ಅಥವಾ ಅಲಮಾರಿಯಂಥ ಮುಚ್ಚಿದ ಜಾಗದಲ್ಲಿದ್ರೆ ಸಿಗ್ನಲ್ ವೀಕ್ ಆಗಬಹುದು. ರೂಟರ್‌ನ್ನ ಓಪನ್ ಜಾಗದಲ್ಲಿಟ್ಟು ಆಂಟೆನಾ ಸರಿಯಾದ ದಿಕ್ಕಿಗೆ ತಿರುಗಿಸಿ. ಇದ್ರಿಂದ ಕನೆಕ್ಟಿವಿಟಿ ಚೆನ್ನಾಗಿರುತ್ತೆ. ಮೈಕ್ರೋವೇವ್ ಓವನ್ ವೈ-ಫೈ ಸಿಗ್ನಲ್‌ಗಳನ್ನ ದುರ್ಬಲಗೊಳಿಸುತ್ತೆ. 2.4 GHz ಫ್ರೀಕ್ವೆನ್ಸಿಲಿ ಕೆಲಸ ಮಾಡೋದ್ರಿಂದ ಸಿಗ್ನಲ್ ವೀಕ್ ಆಗುತ್ತೆ. ನಿಮ್ಮ ರೂಟರ್ ಅಡುಗೆ ಮನೇಲಿ ಮೈಕ್ರೋವೇವ್ ಹತ್ರ ಇದ್ರೆ ಬೇರೆಡೆಗೆ ಸರಿಸಿ.
ಹೀಗೆ ಮಾಡಿದ್ರೆ ಸಿಗ್ನಲ್ ಸ್ಟ್ರಾಂಗ್ ಆಗುತ್ತೆ. ಅಡುಗೆ ಮನೆಯಿಂದ ದೂರ ಮನೆಯ ಮಧ್ಯದಲ್ಲಿ ವೈ-ಫೈ ಇನ್ಸ್ಟಾಲ್ ಮಾಡೋಕೆ ಟ್ರೈ ಮಾಡಿ. ಇಷ್ಟೆಲ್ಲಾ ಮಾಡಿದ್ರೂ ಸ್ಪೀಡ್ ಹೆಚ್ಚಾಗ್ತಿಲ್ಲ ಅಂದ್ರೆ ಸರ್ವಿಸ್ ಪ್ರೊವೈಡರ್‌ಗಳನ್ನ ಕಾಂಟ್ಯಾಕ್ಟ್ ಮಾಡಿ.