ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರಿರುವ ದೇಶ. ಇಲ್ಲಿ ಅನೇಕ ಧರ್ಮದ ಜನರು ಅವರವರ ಸಾಂಪ್ರದಾಯಿಕತೆ, ಆಚಾರ-ವಿಚಾರಗಳಿಗೆ ತಕ್ಕಂತೆ ಬದುಕು ನಡೆಸುತ್ತಾರೆ. ಹಿಂದೂ ಧರ್ಮದಲ್ಲಿ ಹೆಣ್ಮಕ್ಕಳು ಬಳೆ ಧರಿಸುವುದು ಒಂದು ರೀತಿಯ ಸಂಪ್ರದಾಯಿಕವಾಗಿದೆ. ಮದುವೆಯಾಗಿದ್ದರೆ ಈ ಪದ್ಧತಿ ಸ್ವಲ್ಪ ಕಡ್ಡಾಯ ಕೂಡಾ. ಆದರೆ ಇದನ್ನು ಕೇವಲ ನಂಬಿಕೆಯ ವಿಚಾರವಾಗಿ ಮಾತ್ರ ನೋಡದೆ ವೈಜ್ಞಾನಿಕವಾಗಿಯೂ ನೋಡಿದ್ರೆ ಅದರ ಹಿಂದಿನ ಕಾರಣ ಬೇರೇನೆ ಇದೆ.
ಬಳೆಗಳನ್ನು ಮಣಿಕಟ್ಟಿನ ಮೇಲೆ ಹಾಕುವುದರಿಂದ ಇವುಗಳ ಘರ್ಷಣೆಯಿಂದಾಗಿ ರಕ್ತದ ಸಂಚಾರ ಸುಗಮವಾಗಿರುತ್ತದೆ. ಪುರಾತನ ಕಾಲದಲ್ಲಿ ಪುರುಷರು ಕೂಡಾ ಬಳೆ ಧರಿಸುತ್ತಿದ್ದದ್ದು ಇದೇ ಕಾರಣಕ್ಕಾಗಿ. ಸೀಮಂತದ ಸಂದರ್ಭ ಗರ್ಭಿಣಿಯರಿಗೆ ಬಳೆ ತೊಡಿಸಲಾಗುತ್ತದೆ. ಇದನ್ನು ನಾವು ಆಚರಣೆಯ ರೂಪವಾಗಿ ಮಾತ್ರ ನೋಡಿದ್ದೇವೆ. ಆದರೆ ಹೀಗೆ ಧರಿಸುವುದರಿಂದ ಮಗುವಿನ ಮೆದುಳಿನ ಜೀವಕೋಶಗಳು ಸಕ್ರಿಯಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಬಳೆಗಳ ಸದ್ದು ಮಗು ಶಬ್ಧ ಗುರುತಿಸಲು ಆರಂಭಿಸುತ್ತದೆ.
ಇನ್ನು ವೈವಿಧ್ಯ ಬಣ್ಣದ ಬಳೆಗಳು ಮನಸ್ಸನ್ನು ನಿರಾಳಗೊಳಿಸುತ್ತದೆ. ಕಣ್ಣುಗಳಿಗೆ ವಿಶ್ರಾಂತಿ ನೀಡುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಬಳೆಯಿಂದ ಮೊಳಗುವ ಶಬ್ಧ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಹೀಗೆ ಮಹಿಳೆಯರು ಬಳೆ ಧರಿಸುವುದು ಕೇವಲ ಸಂಪ್ರದಾಯದ ಒಂದು ಭಾಗವಾಗಿರದೆ ಇದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ.