ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಿಂದೆ ಮಹಿಳಾ SPG ಕಮಾಂಡೋ ಫೊಟೋ ಎಲ್ಲೆಡೆ ವೈರಲ್ ಆಗುತ್ತಿದೆ.2015 ರಿಂದ, ಎಸ್ಪಿಜಿಯ ಕ್ಲೋಸ್ ಪ್ರೊಟೆಕ್ಷನ್ ಟೀಮ್ನಲ್ಲಿ (ಸಿಪಿಟಿ) ಮಹಿಳೆಯರನ್ನೂ ಸೇರಿಸಲಾಗಿದೆ.ಇವರಿಗೆ ಸಂಸತ್ತಿನ ಒಳಗೆ ಹೊರಗೆ ಹೋಗುವ ಮಹಿಳೆಯರನ್ನು ಮೇಲ್ವಿಚಾರಣೆ ಮಾಡುವ ಜವಾಬ್ಧಾರಿಯನ್ನು ನೀಡಲಾಗಿದೆ.ಪ್ರಸ್ತುತ, ಎಸ್ಪಿಜಿ 100 ಮಹಿಳಾ ಕಮಾಂಡೋಗಳನ್ನು ಹೊಂದಿದೆ. SPG ಕಮಾಂಡೋಗಳು ಅನ್ನುವ ವಿಂಗ್ ಅನ್ನು 1985 ರಲ್ಲಿ ಸ್ಥಾಪನೆ ಮಾಡಲಾಗಿತ್ತು.ಪ್ರಧಾನಿ, ಮಾಜಿ ಪ್ರಧಾನ ಮಂತ್ರಿಗಳು ಮತ್ತು ಅವರ ನಿಕಟ ಕುಟುಂಬಗಳಿಗೆ ಭದ್ರತೆಯನ್ನು ಒದಗಿಸುವುದು ಈ ವಿಂಗ್ ನ ಕರ್ತವ್ಯವಾಗಿದೆ.ಈ ಕಮಾಂಡೋಗಳು ಇಂಟೆಲಿಜೆನ್ಸ್ ಬ್ಯೂರೋ ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಪಡೆಗಳೊಂದಿಗೆ ಸಹಕರಿಸುತ್ತದೆ.
