ಚಿತ್ರದುರ್ಗ: ಜ್ಞಾನಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಮಾತುಗಳು ಮತ್ತು ಆಲೋಚನೆಗಳು ಜಗತ್ತನ್ನು ಆಳುತ್ತವೆ ಎಂದು ತಾಂತ್ರಿಕ ವಿಭಾಗದ ಮುಖ್ಯಸ್ಥ ಕೆ.ಕೆ.ಮಣಿ ಹೇಳಿದರು.
ಭಾರತೀಯ ಸಾರ್ವಜನಿಕ ಪ್ರಸಾರ ಸೇವೆ, ಪ್ರಸಾರ ಭಾರತಿ ಆಕಾಶವಾಣಿ ನಿಲಯದಿಂದ ಗುರುವಾರ ನಗರದ ಆಕಾಶವಾಣಿ ನಿಲಯದಲ್ಲಿ ಆಯೋಜಿಸಲಾದ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ‘ಕನ್ನಡ ರಾಜ್ಯಯೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಮಾತು ಮತ್ತು ಆಲೋಚನೆಗಳು ಉದಾತ್ತಗೊಂಡಾಗ ನಮ್ಮ ಚಿಂತನೆಯ ಗುಣಮಟ್ಟ ಕೂಡಾ ಉತ್ತಮಗೊಳ್ಳುತ್ತದೆ. ಕನ್ನಡವನ್ನು ಕಟ್ಟುವ ನೆಲೆಗಟ್ಟಿನಲ್ಲಿ ಆಕಾಶವಾಣಿಯ ನಿರೂಪಕರ ಪಾತ್ರ ಮಹತ್ವದ್ದು. ಹೆಚ್ಚು ಹೆಚ್ಚು ನಾವೀನ್ಯತೆಯೊಂದಿಗೆ ಧ್ವನಿಯ ಮೂಲಕ ಭಾವ ಸಾಧ್ಯತೆಗಳನ್ನು ಶೋತೃಗಳ ಹೃದಯಕ್ಕೆ ದಾಟಿಸುವ ಪ್ರಯತ್ನ ಮಾಡಬೇಕು ಎಂದರು.
ನಿಲಯದ ಕಾರ್ಯಕ್ರಮದ ಮುಖ್ಯಸ್ಥರಾದ ಎಸ್. ಆರ್. ಭಟ್ ಮಾತನಾಡಿ, ಕನ್ನಡದ ನೆಲ, ಜಲ ಭಾಷೆ ಉಳಿಸಿ ಬೆಳೆಸುವುದರೊಂದಿಗೆ ಮಾಹಿತಿ, ಮನೋರಂಜನೆ, ಸಾಹಿತ್ಯ, ಶಿಕ್ಷಣ, ಕಲೆ ಇವುಗಳನ್ನು ಸ್ಪರ್ಧಾತ್ಮಕವಾದ ಮಾಧ್ಯಮ ಜಗತ್ತಿನಲ್ಲಿ ಇಂದಿಗೂ ಗುಣಾತ್ಮಕ ಒಳನೋಟದೊಂದಿಗೆ ನಿತ್ಯವೂ ಪ್ರಸ್ತುತ ಪಡಿಸುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿಲಯದ ಪ್ರಸಾರ ವಿಭಾಗದ ಮುಖ್ಯಸ್ಥರಾದ ಡಿ.ಆರ್.ಶಿವಪ್ರಕಾಶ್ ಮಾತನಾಡಿ, ದೇಶದ ಎಲ್ಲಾ ರಾಜ್ಯಗಳಲ್ಲಿ ಆಕಾಶವಾಣಿಯೂ ವರ್ಷದ 365 ದಿನಗಳ ಕಾಲ ಆಯಾ ರಾಜ್ಯದ ಭಾಷೆ, ನಾಡು, ನುಡಿಗಾಗಿ ಸೇವೆಸಲ್ಲಿಸುತ್ತಿದೆ. ಭಾರತದ ಭಾಷೆ, ಸಂಸ್ಕೃತಿ, ನುಡಿ, ಪರಂಪರೆಯನ್ನು ಈ ನಾಡಿಗೆ ಅರ್ಥಪೂರ್ಣವಾಗಿ ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಂತ್ರಿಕ ವಿಭಾಗದ ಆನಂದಪ್ಪ, ಶಿವಮೂರ್ತಿ, ತ್ಯಾಗರಾಜ್, ದೇವದಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದ