ಚಿತ್ರದುರ್ಗ : ನಗರದ ಪ್ರಸನ್ನ ಟಾಕೀಸ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕಚೇರಿಯಲ್ಲಿ ಸಿ.ಐ.ಟಿ.ಯು. ವತಿಯಿಂದ ಗುರುವಾರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ಸಿ.ಐ.ಟಿ.ಯು. ಜಿಲ್ಲಾ ಸಂಚಾಲಕ ಸಿ.ಕೆ.ಗೌಸ್ಪೀರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಅಮೇರಿಕಾದ ಚಿಕಾಗೋ ನಗರದಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಅನೇಕ ಕಾರ್ಮಿಕರು ಬಲಿಯಾದರು. ಹುತಾತ್ಮ ಕಾರ್ಮಿಕರ ಸ್ಮರಣಾರ್ಥವಾಗಿ ಪ್ರತಿ ತಿಂಗಳು ಮೇ.1 ರಂದು ಕಾರ್ಮಿಕ ದಿನಾಚರಣೆ ಆಚರಿಸಲಾಗುವುದು. ದಿನಕ್ಕೆ ಎಂಟು ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ, ಎಂಟು ಗಂಟೆಗಳ ಕಾಲ ಮನರಂಜನೆಗಾಗಿ ಕಾರ್ಮಿಕರು ಚಿಕಾಗೋದಲ್ಲಿ ಬೀದಿಗಿಳಿದು ದೊಡ್ಡ ಹೋರಾಟ ನಡೆಸಿದ ಸಂದರ್ಭದಲ್ಲಿ ಅನೇಕರು ಪ್ರಾಣ ತ್ಯಾಗ ಮಾಡಿದ್ದರ ಪರಿಣಾಮವಾಗಿ ವಿಶ್ವದಲ್ಲಿಯೇ ಕಾರ್ಮಿಕರ ದಿನಾಚರಣೆಯನ್ನ ಆಚರಿಸಿ ಹುತಾತ್ಮ ಕಾರ್ಮಿಕರಿಗೆ ಗೌರವ ಸಲ್ಲಿಸಲಾಗುವುದೆಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಮೇ.1 ರಂದು ಕಾರ್ಮಿಕರು ಯಾವುದೆ ಕಾರಣಕ್ಕೂ ಕೆಲಸ ಮಾಡಬಾರದು ಕಡ್ಡಾಯವಾಗಿ ರಜೆ ಘೋಷಿಸುವಂತೆ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿದ್ದೆ. ಆದರೂ ಅಧಿಕಾರಿ ಕಾರ್ಮಿಕರ ಬಗ್ಗೆ ಅಸಡ್ಡೆ ತೋರಿದ್ದಾರೆ. ಇಂತಹ ಅಧಿಕಾರಿ ನಮ್ಮ ಜಿಲ್ಲೆಯಲ್ಲಿ ಇರುವುದು ಬೇಡ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರಮೋದಿರವರು ಮೇ.1 ರಂದು ಕಾರ್ಮಿಕರಿಂದ ಯಾರು ದುಡಿಸಿಕೊಳ್ಳಬಾರದೆಂದು ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ರಂಗಸ್ವಾಮಿ, ಗಂಗಾಧರ್, ಮುಬಾರಕ್, ಮಲ್ಲಿಕಾರ್ಜುನ್, ಬಾಬು, ಶೇಖ್ಫರೀದ್, ನಾಗರಾಜ್, ದೇವರಾಜ್ ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿದ್ದರು.