ಬೆಂಗಳೂರು: ಅಂತೂ ಇಂತೂ ಬಿಜೆಪಿ ಕೇಂದ್ರ ಶಿಸ್ತು ಸಮಿತಿಗೆ 9 ಪುಟಗಳ ಉತ್ತರವನ್ನು ರೆಬಲ್ಸ್ ಟೀಂ ನಾಯಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ನೀಡಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ.
ಆದರೆ ಶಿಸ್ತು ಸಮಿತಿ ನೋಟಿಸ್‌ಗೆ ಉತ್ತರ ಕೊಟ್ಟಿರುವ ಬಗ್ಗೆ ಇನ್ನೂ ಅಧಿಕೃತವಾಗಿ ಯತ್ನಾಳ್ ಹೇಳಿಕೆ ನೀಡಿಲ್ಲ, ಈ ಹಿಂದೆ ನೋಟಿಸ್ ಬಂದಿಲ್ಲ, ನೋಟಿಸ್ ಉತ್ತರಿಸಲ್ಲ ಎಂಬ ದಾರಿಯಲ್ಲಿ ಯತ್ನಾಳ್ ಹೇಳಿದ್ದರು. ಆದ್ರೆ ಈಗ ಯತ್ನಾಳ್ ಆಪ್ತರ ಮಾಹಿತಿ ಪ್ರಕಾರ ಇ -ಮೇಲ್ ಮುಖೇನ 9 ಪುಟಗಳ ಉತ್ತರವನ್ನ ಶಿಸ್ತು ಸಮಿತಿಗೆ ಕಳಿಸಿದ್ದಾರೆ ಎನ್ನಲಾಗಿದೆ. ಬಹುತೇಕವಾಗಿ ಈ ಹಿಂದೆ ಏನು ಉತ್ತರಿಸಿದ್ದಾರೋ ಅದೇ ಉತ್ತರವನ್ನೇ ಈ ಬಾರಿಯೂ ಶಿಸ್ತು ಸಮಿತಿಗೆ ಮೇಲ್ ಮಾಡಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ಹಿರಿಯರನ್ನ ವಿಶ್ವಾಸಕ್ಕೆ ಪಡೆದುಕೊಳ್ಳದಿರೋದು, ಹೊಂದಾಣಿಕೆ ರಾಜಕಾರಣ ಮತ್ತು ಏಕ ಪಕ್ಷೀಯ ನಿರ್ಧಾರಗಳು ಹೆಚ್ಚಾಗುತ್ತಿರುವ ಬಗ್ಗೆ ವಿಸ್ತೃತವಾಗಿ ಯತ್ನಾಳ್ ಉತ್ತರಿಸಿದ್ದಾರೆ ಎನ್ನಲಾಗಿದೆ. ಕೇವಲ ನಾವು ಮಾತ್ರ ವಿಜಯೇಂದ್ರರನ್ನು ವಿರೋಧಿಸುತ್ತಿಲ್ಲ. ಪಕ್ಷದಲ್ಲಿ ಅನೇಕ ನಾಯಕರು ವಿರೋಧಿಸುತ್ತಿದ್ದಾರೆ.
ಆದ್ರೆ ನಾವು ಮಾತ್ರ ಬಹಿರಂಗವಾಗಿಯೇ ಹೇಳುತ್ತಿದ್ದೇವೆ ಅಷ್ಟೇ ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೇಳಗಿಸಬೇಕು ಎಂಬ ಎಲ್ಲಾ ಅಂಶಗಳೊಂದಿಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಒಂ ಪಾಠಕ್ ಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ನೋಟಿಸ್ ಗೆ ಉತ್ತರಿಸಿದ ಬಳಿಕ ಹೈಕಮಾಂಡ್ ಏನ್ ಹೇಳಲಿದೆ ? ವಿಜಯೇಂದ್ರ ತಂತ್ರವೇನು? ಈ ತಿಂಗಳಲ್ಲಿ ಈ ಸಂಘರ್ಷಕ್ಕೆ ಹೈಕಮಾಂಡ್ ಅಂತ್ಯವಾಡಲಿದ್ಯಾ ? ಕಾದು ನೋಡಬೇಕಿದೆ.