‘ವಕ್ಫ್ ನೋಟಿಸ್ ರದ್ದುಗೊಳಿಸದಿದ್ರೆ ಅಧಿವೇಶನ ವೇಳೆ ಹೋರಾಟ ಮಾಡ್ತೇವೆ’- ಯತ್ನಾಳ್

WhatsApp
Telegram
Facebook
Twitter
LinkedIn

ವಿಜಯಪುರ : ವಕ್ಫ್ ನೋಟಿಸ್ ವಾಪಸ್ ತೆಗೆದುಕೊಂಡರೆ ಸಾಲುವುದಿಲ್ಲ ಅದನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ವಕ್ಫ್ ವಿರುದ್ಧ ಅಧಿವೇಶನ ವೇಳೆ ಹೋರಾಟ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ಕರಾಳ ಕಾನೂನನ್ನು ವಾಪಸ್ ಪಡೆಯಬೇಕು ಎಂದು ಪ್ರಧಾನಿಗಳಿಗೂ ಮನವಿ ಮಾಡಿದ್ದೇವೆ. ಮುಸ್ಲಿಮರಿಗಾಗಿ ವಕ್ಫ್ ಟ್ರಿಬ್ಯುನಲ್ ಒಪ್ಪುವುದಿಲ್ಲ. ದೇಶದಲ್ಲಿ ಇರಬೇಕಾದರೆ ನಮ್ಮ ದೇಶದ ಕಾನೂನು ಪಾಲಿಸಬೇಕು ಎಂದು ತಿಳಿಸಿದರು.

ನ.25 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಹೋರಾಟ ಮಾಡಲಿದ್ದೇವೆ. ನೋಟಿಸ್ ನೀಡದೆ ಇಲ್ಲಿಯವರೆಗೆ ಸೇರ್ಪಡೆಯಾದ ವಕ್ಫ್ ಹೆಸರು ರದ್ದಾಗಬೇಕು. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ವಕ್ಫ್ ವಿರುದ್ಧ ದೆಹಲಿಗೆ ನಿಯೋಗ ಕೊಂಡೊಯ್ಯುತ್ತೇವೆ. ಇನ್ನೊಮ್ಮೆ ಜಂಟಿ ಸಂಸದೀಯ ಸಮಿತಿಗೆ ಮನವಿ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ವಕ್ಫ್ ಟ್ರಿಬ್ಯುನಲ್ ರದ್ದಾಗಬೇಕು ಇದು ನಮ್ಮ ಆಗ್ರಹವಾಗಿದೆ. ಅವರದೇ ಕೋರ್ಟ್, ಅವರದೇ ನ್ಯಾಯಾಲಯ. ಕಳ್ಳರ ಬಳಿ ನ್ಯಾಯ ಬೇಡುವ ಹಾಗಾಗುತ್ತದೆ. ವಕ್ಫ್ ವಿರುದ್ಧ ನಿರಂತರ ಹೋರಾಟ ಮುಂದುವರೆಯಲಿದೆ. ವಕ್ಫ್ ಸಾಯುವವರೆಗೂ ಹೋರಾಟ ಮುಂದುವರೆಯಲಿದೆ. ಮೋದಿಯವರು 42 ಆಫರೇಶನ್ ಮಾಡುತ್ತಿದ್ದಾರೆ. ಅದರಲ್ಲಿಯೂ ವಕ್ಫ್ ಜೀವಂತವಾಗಿ ಉಳಿಯಲ್ಲ. ಜೀವಂತ ಉಳಿದರೂ ಇಂಜೆಕ್ಷನ್ ಕೊಟ್ಟು ಕೊಲ್ಲುತ್ತೇವೆ ಎಂದು ಹೇಳಿದರು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon