ಬೆಂಗಳೂರು: ಗಣಿ ಗುತ್ತಿಗೆಗಳ ತಾತ್ವಿಕ ನವೀಕರಣ ಕುರಿತಂತೆ ಸಿಎಂ ಸಿದ್ದರಾಮಯ್ಯನವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದು ಭಾರೀ ವೈರಲ್ ಆಗಿದೆ.
ಮುಖ್ಯ ಮಂತ್ರಿಗಳಿಗೆ 5 ಪ್ರಶ್ನೆಗಳು:
1] ಗಣಿ ಗುತ್ತಿಗೆಗಳ ತಾತ್ವಿಕ ನವೀಕರಣಕ್ಕಾಗಿ 108 ಕಂಪನಿಗಳು ಅರ್ಜಿ ಸಲ್ಲಿಸಿದ್ದವು, ಆದರೆ ಕೇವಲ 8 ಕಂಪನಿಗಳನ್ನು ಮಾತ್ರ ಯಾಕೆ ಆಯ್ಕೆ ಮಾಡಲಾಯಿತು ?
2] ಈ 8 ಕಂಪನಿಗಳು ಯಾವ ಆಧಾರದ ಮೇಲೆ ತಾತ್ವಿಕ ನವೀಕರಣಕ್ಕಾಗಿ ಆಯ್ಕೆಗೊಂಡವು ?
3] ಗಣಿ ಗುತ್ತಿಗೆಗಳ ತಾತ್ವಿಕ ನವೀಕರಣಕ್ಕಾಗಿ 8 ಕಂಪನಿಗಳನ್ನು ಆಯ್ಕೆಯಾದ ಸಂಸ್ಥೆಗಳು ಕ್ಯಾಟೆಗರಿ ‘ಸಿ’ ಕಂಪನಿಗಳು ಅಂತ ನಿಮಗೆ ಗೊತ್ತಿರಲಿಲ್ಲವೇ ? (ಕ್ಯಾಟೆಗರಿ ‘ಸಿ’ ಕಂಪನಿಗಳು ಅಂದರೆ ಕಾನೂನುಬಾಹಿರವಾಗಿ ಗುತ್ತಿಗೆ ಗಡಿಗಳನ್ನು 15% ಕ್ಕೂ ಹೆಚ್ಚು ಮೀರಿರುವ ಕಂಪನಿಗಳು)
4] ತಾತ್ವಿಕ ನವೀಕರಣ ಪಡೆದ 8 ಕಂಪನಿಗಳು ಕಾನೂನು ಬಾಹಿರವಾದ ಗಣಿಗಾರಿಕೆ, ಅರಣ್ಯ ಇಲಾಖೆಯಿಂದ ಅನುಮೋದನೆ ಪಡೆಯದೇ ತಮ್ಮ ಗಣಿ ಗುತ್ತಿಗೆಯನ್ನು ರದ್ದುಗೊಂಡಿದ್ದ ಬಗ್ಗೆ ನಿಮಗೆ ಅರಿವು ಇರಲಿಲ್ಲವೇ ?
5] ಗಣಿ ಗುತ್ತಿಗೆ ರದ್ದುಗೊಂಡಿದ್ದ ಕಂಪನಿಗಳಿಗೆ ತಾತ್ವಿಕ ನವೀಕರಣ ಕೊಡುವ ತುರ್ತು ಏನಿತ್ತು ?
ಇನ್ನು ಕೊನೆಯಲ್ಲಿ ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ಇದ್ದೆನೆ ಎಂದು ಪೋಸ್ಟ್ ಮಾಡಿದ್ದಾರೆ.