ಬೆಂಗಳೂರು : ಕರ್ನಾಟಕ ಬಿಜೆಪಿಯಲ್ಲಿ ಕೆಲ ಮಹತ್ವದ ಬೆಳವಣಿಗೆಗಳು ನಡೆದಿವೆ. ಜನವರಿಯಲ್ಲಿ ರಾಜ್ಯ ಘಟಕದಲ್ಲಿ ಮೇಜರ್ ಸರ್ಜರಿಯಾಗುತ್ತೆ ಎನ್ನುವ ಚರ್ಚೆಗಳು ಜೋರಾಗಿವೆ. ಮತ್ತೊಂದೆಡೆ ಹೈಕಮಾಂಡ್ಗೆ ಸಂದೇಶ ರವಾನಿಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ಬೆಂಬಲಿಗರು ಯಡಿಯೂರಪ್ಪ ಉತ್ಸವವನ್ನ ಮಾಡಲು ಮುಂದಾಗಿದ್ದಾರೆ. ನಿಮಗೆ ನೆನಪಿರಬಹುದು ವಿಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬವನ್ನ ಸಿದ್ದರಾಮೋತ್ಸವ ಎಂಬ ಹೆಸರಿನಡೆ ಆಚರಿಸಿ ಅಬ್ಬರಿಸಿದ್ದರು. ಈಗ ಯಡಿಯೂರಪ್ಪ ಬೆಂಬಲಿಗರ ಸರದಿ. ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಹುಟ್ಟುಹಬ್ಬವನ್ನ ದಾವಣಗೆರೆಯಲ್ಲಿ ಆಚರಿಸುವುದಕ್ಕೆ ವಿಜಯೇಂದ್ರ ಬೆಂಬಲಿಗರು ಮುಂದಾಗಿದ್ದಾರೆ. ಸುಮಾರು 20 ಲಕ್ಷಕ್ಕೂ ಅಧಿಕ ಜನರನ್ನ ಸೇರಿಸಿ, ರಾಷ್ಟ್ರೀಯ ನಾಯಕರನ್ನು ಕರೆಸಲು ಪ್ಲ್ಯಾನ್ ಸಿದ್ಧವಾಗಿದೆ.
ಏನಿದು ಬಿಎಸ್ ಬರ್ತ್ಡೇ ಸೀಕ್ರೆಟ್?
ರಾಜಕೀಯದಲ್ಲಿ ಶಕ್ತಿ ಪ್ರದರ್ಶನವು ಮುಖ್ಯ. ನೀವು ತಾಕತ್ ಇರುವ ವ್ಯಕ್ತಿ ಎಂಬುದನ್ನ ಆಗಾಗ ಪ್ರೂವ್ ಮಾಡಲೇಬೇಕು. ಹೀಗಾಗಿ ರಾಜ್ಯ ಬಿಜೆಪಿಯ ರಾಜಹುಲಿ ಟೈಗರ್ ಜಿಂದಾ ಹೇ ಎಂಬ ಮೆಸೇಜ್ ಅನ್ನ ಬೆಂಬಲಿಗರ ಮೂಲಕ ಪಾಸ್ ಮಾಡುತ್ತಿದೆ. ಬಿಜೆಪಿಯಲ್ಲಿ ಬಣ ಮತ್ತು ಬಣ್ಣ ಎರಡನ್ನು ಬದಲಾಯಿಸುವ ನಾಯಕರಿಗೆ ತಮ್ಮ ಮೇಲುಗೈ ತೋರಿಸುವ ಯತ್ನವನ್ನ ಬಿಎಸ್ ವೈ ಟೀಮ್ ಮಾಡುತ್ತಿದೆ.