ಶ್ರೀನಗರ: “ಅಂತರರಾಷ್ಟ್ರೀಯ ಯೋಗ ದಿನದಂದು ಶ್ರೀನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 3 ಪ್ರಮುಖ ವಿಷಯಗಳನ್ನು ಹೇಳಿದ್ದರು. ಅವುಗಳನ್ನು ಅವರು ಕಾರ್ಯರೂಪಕ್ಕೆ ತಂದಿದ್ದಾರೆ’ ಎಂದು ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಹತ್ವದ ಮೂಲಸೌಕರ್ಯ ಯೋಜನೆಯಾದ ಝಡ್-ಮೋರ್ಹ್ ಸುರಂಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಸಿಎಂ ಒಮರ್ ಅಬ್ದುಲ್ಲಾ ಅವರು, ಹೃದಯಗಳ ವ್ಯತ್ಯಾಸ ಮತ್ತು ದೆಹಲಿಯಿಂದ ದೂರ ಇದ್ದೇವೆ ಎಂಬ ಭಾವನೆಯನ್ನು ತೊಡೆದುಹಾಕುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ರಿ.
ಅದು ಇಂದು ನಿಮ್ಮ ಕೆಲಸದಿಂದ ನಿಜವಾಗಿಯೂ ಸಾಬೀತಾಗಿದೆ. ಆ ಸಮಯದಲ್ಲಿ, ನೀವು ಜಮ್ಮು ಕಾಶ್ಮೀರದ ಜನರಿಗೆ ಶೀಘ್ರದಲ್ಲೇ ಚುನಾವಣೆಗಳು ನಡೆಯಲಿವೆ ಮತ್ತು ಜನರು ತಮ್ಮ ಮತಗಳ ಮೂಲಕ ತಮ್ಮ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆಯುತ್ತಾರೆ ಎಂದು ಹೇಳಿದ್ರಿ. ನೀವು ನಿಮ್ಮ ಮಾತನ್ನು ಉಳಿಸಿಕೊಂಡಿದ್ದೀರಿ ಮತ್ತು 4 ತಿಂಗಳೊಳಗೆ ಚುನಾವಣೆಗಳು ನಡೆದವು” ಎಂದರು.