ಚಿತ್ರದುರ್ಗ: ಸರ್ಕಾರದ ಕೆಲಸಕ್ಕೆ ಮಾತ್ರ ನೀವುಗಳು ನಿವೃತ್ತಿ, ಆದರೆ ಸಮಾಜದ ಕೆಲಸಕ್ಕೆ ಯಾವೊತ್ತು ಸಹಾ ನಿವೃತ್ತಿ ಎನ್ನುವುದು ಇಲ್ಲ ನಿಮ್ಮ ಅನುಭವಗಳನ್ನು ಸಮಾಜಕ್ಕೆ ಧಾರೆ ಎರೆಯುವುದರ ಮೂಲಕ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮುಂದಾಗಿ ಎಂದು ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ ಹಿರಿಯ ನಾಗರೀಕರಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ (ರಿ) ಚಿತ್ರದುರ್ಗ ಜಿಲ್ಲಾ ಘಟಕದವತಿಯಿಂದ ಶನಿವಾರ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ನೌಕರರ ದಿನಾಚರಣೆ, ಪೌರ ಕಾರ್ಮಿಕರಿಗೆ, ಸಂಘದ ಸದಸ್ಯರಿಗೆ ಸನ್ಮಾನ, 2026ನೇ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಅಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ ದೇಹಕ್ಕೆ ಮಾತ್ರ 60 ವರ್ಷವಾಗಿರಬಹುದು ಆದರೆ ನಿಮ್ಮ ಮನಸ್ಸಿಗೆ ಇನ್ನೂ ಆಗಿಲ್ಲ, ನೀವುಗಳು ತಮ್ಮ ಕೆಲಸದಲ್ಲಿ ಗಳಿಸಿದ ಅನುಭವನ್ನು ಇಂದಿನ ತಯುವ ನೌಕರರಿಗೆ ಧಾರೆ ಎರೆಯುವುದರ ಮೂಲಕ ಸರ್ಕಾರ ಉತ್ತಮವಾಗಿ ಸಾಗಲು ಅನುಕೂಲವನ್ನು ಮಾಡಿಕೊಡಬೇಕಿದೆ ಎಂದರು.
ಇಂದಿನ ದಿನಮಾನದಲ್ಲಿ ಹಲವಾರು ಜನತೆ 60 ವರ್ಷ ವಾದರೇ ಸಾಕು ನಮ್ಮಿಂದ ಏನು ಆಗುವುದಿಲ್ಲ ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಯುತ್ತಾರೆ ಆದರೆ ಮನುಷ್ಯ 60 ವರ್ಷವಾದ ಮೇಲೆ ಅನುಭವ ಪ್ರಾರಂಭವಾಗಿ 75 ರವರೆಗೆ ನಡೆಯುತ್ತದೆ. ಆಗ ಮನುಷ್ಯ ಪಕ್ಷವಾಗುತ್ತಾನೆ. ಸಮಾಜಕ್ಕೆ ನಿಮ್ಮಂತಹರ ಅಗತ್ಯ ಇದೆ ನೀವುಗಳು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಕೆಲಸವನ್ನು ಬೇರೆಯವರಿಗೆ ಧಾರೆ ಎರೆಯುವುದರ ಮೂಲಕ ಸಮಾಜದ ಪ್ರಗತಿಗೆ ನೆರವಾಗಬೇಕಿದೆ ಎಂದರು.
ನಿಮ್ಮ ನಿವೃತ್ತಿ ಜೀವನ ಸುಗಮವಾಗಿ ಇರಲು ಇಂತಂಹ ಸಂಘಗಳು ಅಗತ್ಯ ಇದೆ ಮನೆಯಲ್ಲಿ ಇರುವ ಹಲವಾರು ಸಮಸ್ಯೆಗಳನ್ನು ಮರೆಯಲು ಇದು ದಾರಿ ದೀಪವಾಗಿದೆ. ಇಲ್ಲಿ ಸಮಾಜ ಸೇವೆಯನ್ನು ಮಾಡುವುದರ ಮೂಲಕ ನಿಮ್ಮ ಮುಂದಿನ ಬದುಕನ್ನು ಕಳೆಯಬಹುದಾಗಿದೆ. ನಿಮ್ಮ ನೌಕರಿ ಸಮಯದಲ್ಲಿ ನೀವುಗಳು ಬೇರೆಯವರಿಗೆ ಸಹಾಯವನ್ನು ಮಾಡಿದ್ದರೆ ಈಗ ನಿವೃತ್ತಿ ಸಮಯದಲ್ಲಿ ಅವರು ನೆರವಾಗುತ್ತಾರೆ ಬರೀ ಕುಂಟುಂಬಕ್ಕೆ ಮಾನ್ಯತೆಯನ್ನು ನೀಡಿದ್ದರೆ ಬೈದುಕೊಳ್ಳುತ್ತಾರೆ. ನಗರದಲ್ಲಿ ಹಲವಾರು ಸಮಸ್ಯೆಗಳು ಇವೆ ಮರಗಳ ಸಂಖ್ಯೆ ಕಡಿಮೆಯಾಗಿದೆ ಮಕ್ಕಳಿಗೆ ಹಿರಿಯರಿಗೆ ಸರಿಯಾಗಿ ವಾಕಿಂಗ್ ಮಾಡಲು ಉದ್ಯಾನವನ ಇಲ್ಲವಾಗಿದೆ ಇದೇ ರೀತಿ ಹಲವಾರು ಸಮಸ್ಯೆಗಳು ಇವೆ ಇದರ ಬಗ್ಗೆ ಧ್ಬನಿಯನ್ನು ಎತ್ತುವುದರ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಎಂದು ಮಂಜುನಾಥ್ ಕರೆ ನೀಡಿದರು.
2026ರ ನೂತನ ವರ್ಷದ ಕ್ಯಾಲೆಂಡರ್ನ್ನು ಬಿಡುಗಡೆ ಮಾಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಇಂದಿನ ಮಾನವನ ಬದುಕು ಒತ್ತಡದಲ್ಲಿ ಕೂಡಿದೆ, ಎಲ್ಲವನ್ನು ಸಹಾ ಒತ್ತಡದಲ್ಲಿಯೇ ಮಾಡುತ್ತಾನೆ, ಸಂಸ್ಕಾರ ಇಲ್ಲವಾಗಿದೆ, ನಿವೃತ್ತರಾದ ನಿಮ್ಮಿದ ಸಮಾಜಕ್ಕೆ ಉಪಯೋಗ ಬಹಳ ಇದೆ. ನಿಮ್ಮ ಮಾರ್ಗದರ್ಶನ ಅಗತ್ಯವಾಗಿದೆ. ಇಂದಿನ ದಿನದಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದವರಿಗೆ ಮಾರ್ಗದರ್ಶನದ ಕೊರತೆ ಇದೆ ನೀವೃತ್ತರಾದ ನೀವುಗಳು ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ. ಇದ್ದಲ್ಲದೆ ನಿಮ್ಮ ಯಶೋಗಾಥೆಯನ್ನು ಸಹಾ ತಿಳಿಸಬೇಕಿದೆ. ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ನಿವೃತ್ತಿ ಎನ್ನುವುದು ಕಡ್ಡಾಯವಾಗಿದೆ. ಇದನ್ನು ಅನುಭವಿಸಲೇ ಬೇಕಿದೆ. ನಿವೃತ್ತಿಯ ನಂತರ ನಿಮ್ಮಗೆ ಏನಾದರೂ ಸಮಸ್ಯೆಗಳು ಇದ್ದಲ್ಲಿ ನಮಗೆ ತಿಳಿಸಿ ಅದನ್ನು ಪರಿಹಾರ ಮಾಡಲಾಗುವುದು ಎಂದು ಭರವಸೆಯನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ್ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ.ಪ್ರೇಮನಾಥ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ನಿವೃತ್ತ ಸರ್ಕಾರಿ ನೌಕರರು ಒಂದೆಡೆ ಸೇರಿ ತಮ್ಮ ಅನುಭವ ಹಾಗೂ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಸಂಘದ ವೇದಿಕೆಯನ್ನು ರೂಪಿಸಿದೆ, ಈಗ ನಮ್ಮ ಕಚೇರಿ ಊರಿUನಿಂದ ಹೊರಗಡೆ ಇದೆ ಇಲ್ಲಿಗೆ ಬರಕಲು ಹಲವಾರು ಜನರಿಗೆ ಕಷ್ಟವಾಗುತ್ತದೆ ಈ ಹಿನ್ನಲೆಯಲ್ಲಿ ನಮ್ಮ ಸಂಘಕ್ಕೆ ಊರಿಗೆ ಹತ್ತಿರವಾಗುವಂತೆ ಎಲ್ಲಿಯಾದರೂ ನಿವೇಶನವನ್ನು ನೀಡುವುದರ ಮುಲಕ ನಮ್ಮ ನಿವೃತ್ತ ನೌಕರರಿಗೆ ಸಹಾಯವನ್ನು ಮಾಡುವಂತೆ ಅಪರÀ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ, ಸಂಘದ ಸದಸ್ಯರಿಗೆ ಸನ್ಮಾನ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಕ.ರಾ.ಸ.ನಿ.ನೌಕರರ ಕೇಂದ್ರ ಸಂಘದ ಜಂಟಿ ಕಾರ್ಯದರ್ಶಿ ಎಸ್.ಕೆ.ನಾಗೇಂದ್ರ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀಮತಿ ವೈಶಾಲಿ ಜೆ. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಆರ್.ಮಂಜುನಾಥ, ಅಂತರಾಷ್ಟ್ರೀಯ ರೋಟರಿ ಸೇವಾಸಂಘದ ರಾಜ್ಯಪಾಲರಾದ ಎಂ.ಕೆ.ರವೀಂದ್ರ ಹಾಗೂ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆ. ಮಲ್ಲೇಶಪ್ಪರವರನ್ನು ಅಭಿನಂದಿಸಲಾಯಿತು.
ನಿವೃತ್ತ ಪ್ರಾಂಶುಪಾಲರು ಮತ್ತು ಚಿಂತಕರಾದ ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪನವರು ಹಿತ ನುಡಿಗಳನ್ನು ನುಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷರಾದ ವೈ.ಚಂದ್ರಶೇ ಖರಯ್ಯ, ಸಾಂಸ್ಕೃತಿಕ ಮತ್ತು ಮನರಂಜನಾ ಕೇಂದ್ರದ ಅಧ್ಯಕ್ಷರಾದ ಟಿ.ಆರ್. ಮಂಜುನಾಥ್ ಕಾರ್ಯಾ ಧ್ಯಕ್ಷರಾದ ಎಂ.ಶಿವಾನಂದಪ್ಪ,ಉಪಾಧ್ಯಕ್ಷರಾದ ಬಿ.ಮಂಜುನಾಥ್ ಎಫ್.ಆರ್.ಹಾಲಗೇರಿ ಖಜಾಂಚಿ ಎನ್. ಆರ್. ಬೈಯಣ್ಣ, ಪ್ರಧಾನ ಕಾರ್ಯದರ್ಶಿ ಟಿ.ತಿಮ್ಮಪ್ಪ ಸೇರಿದಂತೆ ತಾಲ್ಲೂಕು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಎನ್. ವೆಂಕಟಸ್ವಾಮಿ ಪ್ರಾರ್ಥಿಸಿದರೆ ಟಿ.ತಿಮ್ಮಪ್ಪ ಸ್ವಾಗತಿಸಿದರು. ಸಾಂಸ್ಕøತಿಕ ಕಾರ್ಯದರ್ಶಿ ಜ್ಞಾನ ಮೂರ್ತಿ ವಂದಿಸಿದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ತಿಳಿಸಿದ್ದಾರೆ.
ಶಿಕ್ಷಕರಾದ ಬಿ.ಹೆಚ್.ರಾಮಚಂದ್ರಶೆಟ್ಟಿ ಬಿ. ಮಂಜುನಾಥ್ ಕೆ.ಎಸ್.ಜಯಣ್ಣ, ಹೆಚ್.ರಂಗಸ್ವಾಮಿ, ಅರಣ್ಯ ಅಧಿಕಾರಿಗಳಾದ ಟಿ.ಗಿಡ್ಡಪ್ಪ, ಶಿಕ್ಷಣ ಇಲಾಖೆಯ ಬಿ.ಜಿ.ಜಯದೇವಪ್ಪ, ಅಧೀಕ್ಷಕರಾದ ವಿ.ಮಾರುತಿ ರಾಮಯ್ಯ, ಜಲಾನಯನ ಇಲಾಖೆಯ ಕೆ.ತಿಮ್ಮಣ್ಣ, ಜಿ.ಪಿ. ನಾಗರಾಜ್ ಎ.ಒ. ಕಂದಾಯ ಇಲಾಖೆಯ ಪಿ.ಡಿ.ಎಸ್., ಡಿ.ಟಿ.ನಾಗರಾಜ, ಶ್ರೀಮತಿ ಮಮತಾಜ್.ಸಿ.ಕೆ. ಪ್ರಾಂಶುಪಾಲರಾದ ಎಂ.ಸಿ. ಮುರುಗೇಂದ್ರಯ್ಯ, ವೈದ್ಯರಾದ ಡಾ|| ರಂಗಾರೆಡ್ಡಿ, ಆರೋಗ್ಯ ಪರಿವೀಕ್ಷಕರಾದ ಪಿ. ಲಿಂಗಪ್ಪ, ವಿಶ್ವನಾಥನ್, ಕೃಷಿ ಅಧಿಕಾರಿ ಪಿ.ಎಸ್. ನಂಜುಂಡರಾವ್, ಔಷಧಿ ವಿತರಕರಾದ ಟಿ. ದುರುಗಪ್ಪ, ಇಂಜಿನಿಯರ್ ಎಸ್.ಎನ್.ಮರೇಗೌಡ, ಪೊಲೀಸ್ ಬಿ.ಎನ್. ವಿಜಯಕುಮಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ವೈ.ನಾಗರಾಜ ಸನ್ಮಾನಿತರಾದ ಸದಸ್ಯರುಗಳಾಗಿದ್ದಾರೆ.
































