ಕಲಬುರ್ಗಿ: ನಗರದ ಖಾಸಗಿ ಕಾಲೇಜೊಂದರಲ್ಲಿ ಬಿ.ಎಸ್ಸಿ. ಓದುತ್ತಿದ್ದ ಜೈನ ಯುವತಿಯೊಬ್ಬಳು ನಾಪತ್ತೆಯಾಗಿದ್ದು, ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.
ಗೊಬ್ಬುರ ಗ್ರಾಮದ ಯುವತಿ ನಾಪತ್ತೆಯಾಗಿರುವುದಾಗಿದೆ. ಜುಲೈ 30 ರಂದು ಬಿ.ಎಸ್ಸಿ. ಪರೀಕ್ಷೆ ಬರೆಯಲು ಕಾಲೇಜಿಗೆ ತೆರಳಿದ ಆಕೆ ಬಳಿಕ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾಳೆ. ಈಕೆ ನಾಪತ್ತೆಯಾಗಿರುವುದರ ಹಿಂದೆ ಮುಸ್ಲಿಂ ಯುವಕನ ಕೈವಾರ ಇದೆ ಎಂದು ಶಂಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಯುವತಿ ಮುಸ್ಲಿಂ ಯುವಕ ಮಶಾಕ್ ಎಂಬಾತನ ಜೊತೆಗೆ ಸಲುಗೆಯಿಂದಿದ್ದಳು. ಇದೇ ಕಾರಣಕ್ಕೆ ಹೆತ್ತವರು ಆಕೆಗೆ ಬುದ್ಧಿ ಹೇಳಿ ಕಾಲೇಜು ಬಿಡಿಸಿ, ಕೇವಲ ಪರೀಕ್ಷೆ ಬರೆಯಲು ಮಾತ್ರವೇ ಕಾಲೇಜಿಗೆ ಕಳುಹಿಸಿದ್ದರು. ಪರೀಕ್ಷೆಗೆ ಹೋದ ಯುವತಿ ಮರಳಿ ಮನೆಗೆ ಬಂದಿಲ್ಲ. ಆದ್ದರಿಂದ ಮಶಾಕ್ ಜೊತೆ ಆಕೆ ಪರಾರಿಯಾಗಿರುವ ಸಂದೇಹ ವ್ಯಕ್ತವಾಗಿದೆ.