ಪ್ರೀತಿಸಿದ ಯುವಕ ಮತ್ತು ಆತನ ಕುಟುಂಬದವರಿಂದ ಮತಾಂತರ ಒತ್ತಾಯಕ್ಕೆ ಒಳಗಾದ 23 ವರ್ಷದ ಯುವತಿ ಸಾವಿಗೆ ಶರಣಾಗಿದ್ದಾಳೆ. ಮೃತ ಯುವತಿ ಸೋನಾಗೆ ಮತಾಂತರಕ್ಕೆ ಬಲವಂತ ಮಾಡಲಾಗಿತ್ತು. ಆದರೇ, ಪ್ರಿಯಕರ ಬೇರೊಬ್ಬಳೊಂದಿಗೂ ಸಂಬಂಧ ಹೊಂದಿದ್ದ. ಇದರಿಂದ ನೊಂದು ಯುವತಿ ಸಾವಿಗೆ ಶರಣಾಗಿದ್ದಾಳೆ.
ಈಕೆ ಕೇರಳದ ಎರ್ನಾಕುಲಂನಲ್ಲಿ ಟಿಟಿಸಿ ಟೀಚರ್ ಟ್ರೈನಿಂಗ್ ತರಬೇತಿ ಪಡೆಯುತ್ತಿದ್ದರು. ಈಕೆ ರಮೀಜ್ ಮೊಹಮ್ಮದ್ ಎಂಬ ಮುಸ್ಲಿಂ ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಆತನ ಮನೆಯವರು ಹಾಗೂ ಆತ ಮದುವೆಗೂ ಮೊದಲೂ ಧಾರ್ಮಿಕವಾಗಿ ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ಸೋನಾಗೆ ಒತ್ತಾಯಿಸಿದ ಆರೋಪ ಕೇಳಿ ಬಂದಿದೆ. ಇದರಿಂದ ನೊಂದು ಸೋನಾ ಸಾವಿಗೆ ಶರಣಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸೋನಾ ಎಲ್ದೋಸ್ ಪ್ರಿಯಕರ ರಮೀಜ್ ಮೊಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಆತ ಮತಾಂತರ ಮಾಡಿಕೊಳ್ಳದೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ತನ್ನ ಮನೆ ಬಿಟ್ಟು ಹೋದ ಆಕೆ ರಮೀಜ್ ಮೊಹಮ್ಮದ್‌ನ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಆದರೆ ಆಕೆ ಮನೆಬಿಟ್ಟು ಹೋದ ನಂತರ ಪ್ರಿಯಕರನ ಮನಸ್ಸು ಬದಲಾಗಿದೆ. ಆತ ಹಾಗೂ ಆತನ ಮನೆಯವರು ಆಕೆಗೆ ಮದುವೆಗೂ ಮೊದಲು ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾರೆ. ಇದರಿಂದ ಖಿನ್ನತೆಗೊಳಗಾದ ಆಕೆ ಆಗಸ್ಟ್ 9 ರಂದು ಕರುಕಡಂನಲ್ಲಿರುವ ತನ್ನ ನಿವಾಸದಲ್ಲಿ ಸಾಯಲು ಯತ್ನಿಸಿದ್ದಾಳೆ. ಆದರೆ ಮನೆಯವರು ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.