ಕಾಸರಗೋಡು: ಅಪ್ರಾಪ್ತ ಬಾಲಕಿಯನ್ನು ವಿವಾಹ ವಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಕಾಸರಗೋಡಿನ ಕೊಡಿಯಮ್ಮೆ ಚೆಪ್ಪಿನಡ್ಕದ ಸಾಲು ಕಿಂಗ್ ಅಲಿಯಾಸ್ ಮೊಹಮ್ಮದ್ ಸಾಲಿ(35) ಬಂಧಿತ ಆರೋಪಿ.
ಆರೋಪಿಯು ವಿದೇಶದಿಂದ ಹಿಂದಿರುಗುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ಸುಮಾರು ಏಳು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಾಲು ಕಿಂಗ್ ಮೀಡಿಯ, ಸಾಲು ಕಿಂಗ್ ವ್ಲಾಗ್ಸ್, ಸಾಲು ಕಿಂಗ್ ಫ್ಯಾಮಿಲಿ ಮೊದಲಾದ ಹೆಸರಿನಲ್ಲಿ ಸಕ್ರಿಯನಾಗಿದ್ದನು. ಇನ್ನು 2016 ರಲ್ಲಿ ಈತ ವಿವಾಹವಾಗಿದ್ದು, ಮೂವರು ಮಕ್ಕಳು ಕೂಡ ಇದ್ದಾರೆ.
ಈ ನಡುವೆ ಪತ್ನಿಯೊಂದಿಗೆ ವಿರಸ ಉಂಟಾಗಿದ್ದು, ಹದಿನೈದರ ಬಾಲಕಿ ಜೊತೆ ಈತ ಸಂಬಂಧ ಬೆಳೆಸಿದ್ದನು. ಬಾಲಕಿಯು ಇನ್‌ಸ್ಟಾಗ್ರಾಂ, ಸ್ನ್ಯಾಪ್ ಚಾಟ್ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದಳು. ಬಳಿಕ ವಿವಾಹವಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿದ್ದನು ಎನ್ನಲಾಗಿದೆ. ಈಗ ಪೊಲೀಸರ ಅತಿಥಿ.!