ಅಮೇರಿಕಾ:ಅಮೇರಿಕಾದಲ್ಲಿ ನೆಲೆಸಲು ಗ್ರೀನ್ ಕಾರ್ಡ್ ಪಡೆಯುವುದಕ್ಕಾಗಿ ವರ್ಷಗಟ್ಟಲೆ ಕಾದು ಅದು ಬರುವಷ್ಟರಲ್ಲಿ 4 ಲಕ್ಷಕ್ಕೂ ಹೆಚ್ಚು ಭಾರತೀಯರು ಸತ್ತು ಹೋಗಿರುತ್ತಾರೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ. ಗ್ರೀನ್ ಕಾರ್ಡ್ ಅಥವಾ ಪರ್ಮನೆಂಟ್ ರೆಸಿಡೆಂಟ್ ಕಾರ್ಡ್ ಎಂಬುದು ಅಮೆರಿಕ ವಲಸಿಗರಿಗೆ ದೇಶದಲ್ಲಿ ಶಾಶ್ವತ ನಿವಾಸವನ್ನು ನೀಡುವ ದಾಖಲೆಯಾಗಿದೆ.ಅಮೇರಿಕಾದ ಪೌರತ್ವ ಮತ್ತು ವಲಸೆ ಸೇವೆಗಳು (USCIS) ಯುನೈಟೆಡ್ ಸ್ಟೇಟ್ಸ್ನಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅಧಿಕಾರ ಹೊಂದಿದ್ದಾರೆ ಎಂಬುದಕ್ಕೆ ಪುರಾವೆಯಾಗಿ ಎಲ್ಲಾ ಖಾಯಂ ನಿವಾಸಿಗಳಿಗೆ ಗ್ರೀನ್ ಕಾರ್ಡ್ ಅನ್ನು ನೀಡುತ್ತದೆ.
ಯುಎಸ್ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಬ್ಯಾಕ್ಲಾಗ್ನಲ್ಲಿ ಭಾರತೀಯರ 11 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ ಎಂದು ವರದಿ ಹೇಳಿದೆ.
ದೇಶದಲ್ಲಿ ಈಗ ಬಾಕಿ ಉಳಿದಿರುವ ಒಟ್ಟು 18 ಲಕ್ಷ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಅರ್ಜಿಗಳಲ್ಲಿ ಭಾರತೀಯರು 63% ರಷ್ಟಿದ್ದಾರೆ ಎಂದು ಯುಎಸ್ ಮೂಲದ ಥಿಂಕ್ ಟ್ಯಾಂಕ್ ಕ್ಯಾಟೊ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ .
ವರದಿಯ ಪ್ರಕಾರ, ಭಾರತದಿಂದ ಹೊಸ ಅರ್ಜಿದಾರರು ಗ್ರೀನ್ ಕಾರ್ಡ್ ಸಿಗುವುದಕ್ಕೆ ಸುಮಾರು 134 ವರ್ಷಗಳಿಂದಲೂ ಹೆಚ್ಚು ವರ್ಷ ಕಾಯಬೇಕು. ಸುಮಾರು 424,000 ಉದ್ಯೋಗ ಆಧಾರಿತ ಅರ್ಜಿದಾರರು ಗ್ರೀನ್ ಕಾರ್ಡ್ ಪಡೆಯುವುದಕ್ಕಾಗಿ ಕಾಯುತ್ತಾ ಸಾಯುತ್ತಾರೆ. ಅವರಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚು ಭಾರತೀಯರಾಗಿರುತ್ತಾರೆ ಎಂದು ವರದಿ ತಿಳಿಸಿದೆ
ಗ್ರೀನ್ ಕಾರ್ಡ್ಗಾಘಿ ಕಾಯುವುದು ಅಮೇರಿಕಾದಲ್ಲಿ ನಿಧಾನಗತಿಯ ಬಿಕ್ಕಟ್ಟಾಗಿದೆ. ಇದು ಪ್ರಸ್ತುತ ಬಿಡೆನ್ ಆಡಳಿತದ ಪ್ರಯತ್ನಗಳು ಮತ್ತು ಭಾರತೀಯ-ಅಮೇರಿಕನ್ ಅಧಿಕಾರಿಗಳ ಉಪಕ್ರಮಗಳ ಹೊರತಾಗಿಯೂ ಇದು ಭಾರತೀಯ ಅರ್ಜಿದಾರರನ್ನು ನಿರಂತರ ನಿಶ್ಚಲ ಸ್ಥಿತಿಯಲ್ಲಿ ಬಿಟ್ಟಿದೆ ಎಂದು ಹೇಳಿದೆ.