ಅಮರಾವತಿ: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶದ ಸಂಪೂರ್ಣ ಚಿತ್ರಣ ಇನ್ನೇನು ಕೆಲವೇ ಗಂಟೆಗಳಲ್ಲಿ ಸಿಗಲಿದೆ. ಈ ಬಾರಿ ಆಂಧ್ರ ಮತದಾರರು ತೆಲುಗು ದೇಶಂ ಪಕ್ಷಕ್ಕೆ ( ಟಿಡಿಪಿಗೆ) ಆಶೀರ್ವಾದ ಮಾಡಿದಂತೆ ಕಾಣುತ್ತಿದೆ. ಟಿಡಿಪಿ-ಬಿಜೆಪಿ ಜೊತೆಗೆಯಾಗಿ ಸರ್ಕಾರ ರಚಿಸಲು ಸಕಲ ಸಿದ್ಧತೆ ನಡೆಸಿವೆ ಎಂಬ ಮಾಹಿತಿ ಲಭ್ಯವಾಗಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಆಂಧ್ರಪ್ರದೇಶದಲ್ಲಿ ಜನಸೇನಾ ಪಕ್ಷ 17 ಸ್ಥಾನಗಳಲ್ಲಿ, ಟಿಡಿಪಿ 127 ಸ್ಥಾನಗಳಲ್ಲಿ, ಬಿಜೆಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
