ನವದೆಹಲಿ: ಯುದ್ಧ ಪೀಡಿತ ಇಸ್ರೇಲ್ನಿಂದ ಭಾರತೀಯರನ್ನು ರಕ್ಷಿಸಲು ಪ್ರಾರಂಭಿಸಲಾದ ಆಪರೇಷನ್ ಅಜಯ್ ನ ಭಾಗವಾಗಿ, 274 ಭಾರತೀಯ ಪ್ರಜೆಗಳನ್ನು ಹೊತ್ತ ನಾಲ್ಕನೇ ವಿಮಾನವು ಭಾನುವಾರ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ವಿಶೇಷ ಕಾರ್ಯಾಚರಣೆ ಆರಂಭಿಸಿದ ನಂತರ ಇಸ್ರೇಲ್ ನಿಂದ ಭಾರತಕ್ಕೆ ಬಂದ ನಾಲ್ಕನೇ ವಿಮಾನವಾಗಿದೆ.ಇನ್ನು ಇಸ್ರೇಲ್ನಿಂದ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನ ದೆಹಲಿ ತಲುಪುತ್ತಿದ್ದಂತೆ ಅವರನ್ನು ಕೇಂದ್ರ ಸಚಿವ ವಿ.ಕೆ ಸಿಂಗ್ ಬರಮಾಡಿಕೊಂಡಿದ್ದಾರೆ.

































