ನವದೆಹಲಿ : ದೇಶದಲ್ಲಿ 70 ವರ್ಷ ಮೇಲ್ಪಟ್ಟವರೆಲ್ಲರೂ ಆಯುಷ್ಮಾನ್ ಭಾರತ್ ಕಾರ್ಡ್ ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಈ ಕಾರ್ಡ್ ನಿಂದ ಎಲ್ಲಾ ವಯೋವೃದ್ಧರು ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು. ದೆಹಲಿ, ಬಂಗಾಳದಂತಹ ಕೆಲವು ರಾಜ್ಯಗಳಿಗೆ ಆಯುಷ್ಮಾನ್ ಸೇವೆ ಸಿಗುತ್ತಿಲ್ಲ, ಆ ರಾಜ್ಯಗಳ ವರ್ತನೆಯೇ ವೃದ್ಧರಿಗೆ ಶಾಪವಾಗಿ ಪರಿಣಮಿಸಿದೆ ಎಂದರು.
ಆ ರಾಜ್ಯಗಳ ರಾಜಕಾರಣದಿಂದ ಪ್ರಯೋಜನವಾಗದ ವೃದ್ಧರ ಬಳಿ ಮೋದಿ ಕ್ಷಮೆಯಾಚಿಸಿದರು. ದೆಹಲಿಯಲ್ಲಿ ಇಂದು (ಆ.29) ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆಡಿಯಲ್ಲಿ, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ರಕ್ಷಣೆ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೆಹಲಿ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಹೊರತು ಪಡಿಸಿ, ಪ್ರಸ್ತುತ ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ದೇಶದ 4.5 ಕೋಟಿ ಕುಟುಂಬಗಳಲ್ಲಿ ಅಂದಾಜು 6 ಕೋಟಿ ನಾಗರಿಕರು ಪ್ರಯೋಜನೆ ಪಡೆಯಲಿದ್ದಾರೆ. ಅಲ್ಲದೆ, PMJAY ಯೋಜನೆಯಡಿ 7.73 ಕೋಟಿ ಮಂದಿ ಆಸ್ಪತ್ರೆಗಳಲ್ಲಿ ನೋಂದಾಯಿಸಿಕೊಂಡಿದ್ದು, ಶೇ.49 ರಷ್ಟು ಮಹಿಳಾ ಫಲಾನುಭವಿಗಳನ್ನು ಇದು ಒಳಗೊಂಡಿದೆ. ಒಂದು ಲಕ್ಷ ಕೋಟಿಗೂ ಅಧಿಕ ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.