ಹೊಸಪೇಟೆ : ರಾಷ್ಟಿçÃಯ ಆರೋಗ್ಯ ಅಭಿಯಾನದ ಅಡಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸದಸ್ಯ ಕಾರ್ಯದರ್ಶಿ ಜಂಬಯ್ಯ ನಾಯಕ ಅವರು ತಿಳಿಸಿದ್ದಾರೆ.
ಎಸ್ಎನ್ಸಿಯು ವೈದ್ಯಾಧಿಕಾರಿಗಳು, ಆರ್ಬಿಎಸ್ಕೆ ವೈದ್ಯಾಧಿಕಾರಿಗಳು, ಜಿಲ್ಲಾ ಲೆಕ್ಕ ಪತ್ರ ವ್ಯವಸ್ಥಾಪಕರು, ಜಿಲ್ಲಾ ಸಂಯೋಜಕರು, ಜಿಲ್ಲಾ ಸಂಯೋಜಕರು, ಕೋಲ್ಡ್ ಚೈನ್ ಟೆಕ್ನಿಷಿಯನ್, ಜಿಲ್ಲಾ ಪ್ಲೋರೋಸಿಸ್ ಪ್ರಯೋಗಶಾಲಾ ತಂತ್ರಜ್ಞರು, ಜಿಲ್ಲಾ ಗುಣಮಟ್ಟ ಸಲಹೆಗಾರ, ಕಾರ್ಯಕ್ರಮ ವ್ಯವಸ್ಥಾಪಕ, ನಿರ್ವಹಣ ಎಂಜಿನಿಯರ್, ವೈದ್ಯಾಧಿಕಾರಿಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಪಿ.ಹೆಚ್.ಸಿ.ಓ, ದತ್ತಾಂಶ ವ್ಯವಸ್ಥಾಪಕರ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಯ್ದ ಹುದ್ದೆಗಳಿಗೆ ತಕ್ಕಂತೆ ಅರ್ಹತೆ ಹಾಗೂ ಕೋವಿಡ್-19 ಸಂದರ್ಭದಲ್ಲಿ ಸಲ್ಲಿಸಿದ ಸೇವಾವಧಿಗೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತದೆ. ಹೊಸಪೇಟೆಯ ತಾಯಿ ಮತ್ತು ಮಕ್ಕಳ(ಎಂಸಿಎಚ್) ಆಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಆರ್ಸಿಎಚ್ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ಸ್ವಯಂ ಧೃಡೀಕರಿಸಿದ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಅ.20ರ ಶುಕ್ರವಾರ ಸಂಜೆ 5.30ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳ ಹಾಗೂ ಇತರೆ ಮಾಹಿತಿಗಾಗಿ https://vijayanagara.nic.in ವೆಬ್ಸೈಟ್ಗೆ ಭೇಟಿ ನೀಡಬಹುದು.


































