ಸೀಬೆಕಾಯಿ, ಸೀಬೆ ಹಣ್ಣು, ಸೀಬೆ, ಪೇರಲ, ಪೇರಳೆ, ಪೆರುಕಾಯಿ, ಪ್ಯಾರಲಕಾಯಿ, ಚೇಪೆಕಾಯಿ ಹೀಗೆ ಕನ್ನಡದಲ್ಲೇ ಹಲವು ಹೆಸರಿನಿಂದ ಕರೆಯಲ್ಪಡುವ ಬಡವರ ಸೇಬು “ಸೀಬೆ ಹಣ್ಣು. ಸೀಬೆಹಣ್ಣು ಕ್ಯಾಲೋರಿ, ಹೆಚ್ಚಿನ ಫೈಬರ್, ಕಡಿಮೆ ಕೊಬ್ಬಿನ ಹಣ್ಣು.
ಇದು ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಪೇರಲ ಹಣ್ಣಿಗೆ ದೇಹವನ್ನು ತಂಪಾಗಿಸುವ ಶಕ್ತಿ ಇದೆ ಮತ್ತು ಹೊಟ್ಟೆಯ ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತದೆ. ಸೀಬೆಹಣ್ಣಿನ ರಸವು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ, ಇದು ಅಧಿಕ ರಕ್ತದೊತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಇದು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೀಬೆ ಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಅಪಾರವಾದ ಪೌಷ್ಟಿಕಾಂಶಗಳು ಸಿಗುತ್ತವೆ ಎಂದು ಹೇಳುತ್ತಾರೆ.
ಮೊಟ್ಟ ಮೊದಲಿಗೆ ವಿಟಮಿನ್ ‘ ಸಿ ‘ ಅಂಶವನ್ನು ನಾವು ಸೀಬೆ ಹಣ್ಣಿನಲ್ಲಿ ಹೇರಳವಾಗಿ ಕಾಣಬಹುದು. ಸೀಬೆ ಹಣ್ಣಿನ ಸೇವನೆಯಿಂದ ನಮ್ಮ ದೇಹದ ರೋಗ – ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಸತ್ಯ.ಸೀಬೆಹಣ್ಣು ಕ್ಯಾಲೋರಿ, ಹೆಚ್ಚಿನ ಫೈಬರ್, ಕಡಿಮೆ ಕೊಬ್ಬಿನ ಹಣ್ಣು. ಇದು ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.