ಲಾಸ್ ಎಂಜಲೀಸ್: ಆಸ್ಕರ್ ವಿಜೇತ, ಹಾಲಿವುಡ್ನ ಖ್ಯಾತ ನಿರ್ಮಾಪಕ ಜಾನ್ ಲ್ಯಾಂಡೌ(63) ಅವರು ಜುಲೈ ೫ರಂದು ಕೊನೆಯುಸಿರೆಳೆದಿದ್ದಾರೆ.
ಜಾನ್ ಲ್ಯಾಂಡೌ ಅವರು ಹಾಲಿವುಡ್ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ದೀರ್ಘಾವಧಿಯ ನಿರ್ಮಾಪಕ ಪಾಲುದಾರರಾಗಿದ್ದರು. ಕಳೆದ ಕೆಲ ಸಮಯದಿಂದ ಜಾನ್ ಲ್ಯಾಂಡೌ ಅವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಜೇಮ್ಸ್ ಕ್ಯಾಮರೂನ್ ಅವರ ‘ಟೈಟಾನಿಕ್’ ಹಾಗೂ ‘ಅವತಾರ್’ ಸಿನಿಮಾಗಳಿಗೆ ಜಾನ್ ಲ್ಯಾಂಡೌ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಜೇಮ್ಸ್ ಕ್ಯಾಮರೂನ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಅವರು, ಹಾಲಿವುಡ್ ನಲ್ಲಿ ಇನ್ನು ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಜಾನ್ ಲ್ಯಾಂಡೌ ಅವರು ‘ಹನಿ ಐ ಶ್ರಂಕ್ ದಿ ಕಿಡ್ಸ್’ ‘ಡಿಕ್ ಟ್ರೇಸಿ’ ಸಿನಿಮಾಗಳಿಗೆ ಬಂಡವಾಳ ಹೂಡಿಕೆ ಮಾಡಿದ್ದರು. ತನ್ನ ಆತ್ಮೀಯ ಸ್ನೇಹಿತನ ನಿಧನಕ್ಕೆ ಜೇಮ್ಸ್ ಕ್ಯಾಮರೂನ್ ಸಂತಾಪ ಸೂಚಿಸಿದ್ದು, ‘ಒಬ್ಬ ದೊಡ್ಡ ನಿರ್ಮಾಪಕ ಮತ್ತು ಒಬ್ಬ ಮಹಾನ್ ಮನುಷ್ಯ ನಮ್ಮನ್ನು ಅಗಲಿದ್ದಾರೆ’ ಎಂದರು. ಇದರೊಂದಿಗೆ ಹಾಲಿವುಡ್ ನ ಖ್ಯಾತ ಕಲಾವಿದರು ಹಾಗೂ ನಿರ್ದೇಶಕ, ನಿರ್ಮಾಪಕರು ಸಂತಾಪ ಸೂಚಿಸಿರುತ್ತಾರೆ.