ನವದೆಹಲಿ: ಭಾರತೀಯ ರಿಸರ್ವ ಬ್ಯಾಂಕ್ ಇಂಗ್ಲೆಂಡ್ ನಿಂದ ನೂರು ಟನ್ ಗೂ ಅಧಿಕ ಚಿನ್ನವನ್ನು ಭಾರತಕ್ಕೆ ವಾಪಾಸ್ ತಂದಿದೆ. ಸುರಕ್ಷತೆಯ ಕಾರಣಕ್ಕೆ ಆರ್ ಬಿಐ , ಇಂಗ್ಲೆಂಡ್ ನ ಫಾರೆಕ್ಸ್ ರಿಸರ್ವ್ಸ್ನಲ್ಲಿ ಇರಿಸಿದ್ದ ಸ್ವಲ್ಪ ಪ್ರಮಾಣದ ಚಿನ್ನವನ್ನು ಭಾರತ ಮರಳಿ ತನ್ನ ದೇಶಕ್ಕೆ ತಂದಿದೆ.
1991ರ ಬಳಿಕ ಇಷ್ಟೊಂದು ಪ್ರಮಾಣದ ಚಿನ್ನವನ್ನು ವಿದೇಶದಿಂದ ಭಾರತಕ್ಕೆ ತಂದಿದ್ದು ಇದೇ ಮೊದಲು. ಮ್ಮುಂದಿನ ದಿನಗಳಲ್ಲಿ ಮತ್ತಷ್ಟು ಚಿನ್ನಗಳು ಭಾರತಕ್ಕೆ ವಾಪಸ್ ತರಲಾಗುವುದು ಎಂದು ವರದಿಯಾಗಿದೆ.
ಮಾರ್ಚ್ 2023 ರ ಮಾಹಿತಿಯ ಪ್ರಕಾರ ಭಾರತದಲ್ಲಿ ಚಿನ್ನದ ಸಂಗ್ರಹ 827 ಟನ್ನಷ್ಟು ಇದೆ. ಇದರ ಮೌಲ್ಯ 57.195 ಬಿಲಿಯನ್ ಡಾಲರ್ (4.76 ಲಕ್ಷ ಕೋಟಿ ರೂ) ಆಗಿದೆ. ಈ ಪೈಕಿ ಆಗಿದೆ. 413.8 ಟನ್ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ಗೋಲ್ಡ್ ರಿಸರ್ವ್ಸ್ನಲ್ಲಿರುವ ಬಹುಪಾಲು ಚಿನ್ನವನ್ನು ಭಾರತದಲ್ಲೇ ಇರಿಸಿಕೊಳ್ಳಲು ಆರ್ಬಿಐ ತೀರ್ಮಾನಿಸಿದೆ. ಆರ್ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಖರೀದಿಸಿತ್ತು. ಆ ಮೂಲಕ ಜಾಗತಿಕ ಮಟ್ಟದಲ್ಲಿ ಆರ್ಬಿಐ ಚಿನ್ನ ಸಂಗ್ರಹಣೆಯನ್ನು ಹೆಚ್ಚಿಸಿದೆ.
ಇಂಗ್ಲೆಂಡ್ ನ ಫಾರೆಕ್ಸ್ ರಿಸರ್ವ್ಸ್ನಲ್ಲಿ ಚಿನ್ನವನ್ನು ಸಂಗ್ರಹಿಸಿಟ್ಟುಕೊಳ್ಳಲು ದುಬಾರಿ ಶುಲ್ಕ ಪಡೆಯುತ್ತವೆ. ಚಿನ್ನವನ್ನು ಭಾರತದಲ್ಲೇ ಇಟ್ಟುಕೊಂಡರೆ ಈ ಶುಲ್ಕ ಹಣವನ್ನು ಆರ್ಬಿಐ ಉಳಿಸಬಹುದು. ಇದಲ್ಲದೇ ಬದಲಾಗುತ್ತಿರುವ ರಾಜಕೀಯ ಸಂಗತಿಗಳು ಮತ್ತು ಕರೆನ್ಸಿ ಮೌಲ್ಯ ಏರಿಳಿತದ ಭೀತಿಯಿಂದಾಗಿ ಆರ್ಬಿಐ ಈ ಚಿನ್ನವನ್ನು ಭಾರತಕ್ಕೆ ತರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.