ದೆಹಲಿ: ಈ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ್ ನಿರ್ದೇಶನದಲ್ಲಿ ಮೂಡಿಬಂದಿದ್ದ, ರಾಮಾಯಣ ಧಾರವಾಹಿ ಇಂದಿನಿಂದ ಪ್ರಾರಂಭವಾಗಲಿದೆ.
ಧರ್ಮ, ಪ್ರೀತಿ ಮತ್ತು ಸಮರ್ಪಣಾ ಭಾವದ ಅನನ್ಯ ಸಾಹಸಗಾಥೆ…”ರಾಮಾಯಣ” ಧಾರಾವಾಹಿಯು
ಇಂದಿನಿಂದ (ಫೆ.5) ಮತ್ತೊಮ್ಮೆ ಪ್ರಸಾರವಾಗಿದೆ. ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಪ್ರತಿದಿನ ಸಾಯಂಕಾಲ 5 ಗಂಟೆಗೆ ಹಾಗೂ ಮರು ಪ್ರಸಾರವನ್ನು ಮಧ್ಯಾಹ್ನ 12 ಗಂಟೆಗೆ ವೀಕ್ಷಿಸಬಹುದು ಎಂದು ವಾಹಿನಿ ‘X’ ನಲ್ಲಿ ತಿಳಿಸಿದೆ. 80-90ರ ದಶಕದಲ್ಲಿ ಮೂಡಿಬಂದ ಈ ಪೌರಾಣಿಕ ಮೆಗಾ ಧಾರಾವಾಹಿಯು ಭಾರತೀಯ ಕಿರುತೆರೆಯಲ್ಲಿ ಹೆಚ್ಚು ವೀಕ್ಷಣೆ ಪಡೆದು ವಿಶ್ವ ದಾಖಲೆ ಬರೆದಿತ್ತು.