ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ A2 ಆರೋಪಿ ಆಗಿರುವಂತಹ ನಟ ದರ್ಶನ್ ಅವರ ಜಾಮೀನು ಭವಿಷ್ಯ ಎಂದು ನಿರ್ಧಾರವಾಗಲಿದೆ.
ಇಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ ನಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹಾಗಾಗಿ ನಟ ದರ್ಶನ್ ಅವರಿಗೆ ಇಂದು ಜಾಮೀನು ಸಿಗುತ್ತಾ ಎಂದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.