ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪಿಎಂ ಕಿಸಾನ್ 16ನೇ ಕಂತಿನ 2,000 ರೂ. ಸಹಾಯಧನವು ಇದೇ ಫೆಬ್ರವರಿ 28 ರಂದು ರೈತರ ಖಾತೆಗೆ ಜಮಾ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗಿದೆ. ಫೆಬ್ರವರಿ 28ರಂದು ಪ್ರಧಾನಿ ಮೋದಿ ಅವರು 16ನೇ ಕಂತನ್ನು DBT ಮೂಲಕ ದೇಶಾದ್ಯಂತ ರೈತರ ಖಾತೆಗಳಿಗೆ ಕಳುಹಿಸಲಿದ್ದಾರೆ.
ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ 4 ತಿಂಗಳಿಗೊಮ್ಮೆ 2,000 ರೂ.ನಂತೆ ವಾರ್ಷಿಕ 6,000 ರೂ. ಸಹಾಯಧನ ಒದಗಿಸುತ್ತಿದೆ.