ಉಜ್ಜಯಿನಿ: ಅಪ್ರಾಸ್ಪ ಬಾಲಕಿ ಮೇಲೆ ಅತ್ಯಾಚಾರವೆಸಗಿ ರಸ್ತೆಗಳಲ್ಲಿ 8 ಕಿ.ಮೀ ಸಹಾಯಕ್ಕಾಗಿ ಅಂಗಲಾಚುವಂತೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಕ್ತದ ಕಲೆ ಆಟೋವೊಂದರಲ್ಲಿ ಪತ್ತೆಯಾಗಿದ್ದು, ಆಟೋ ಚಾಲಕ ಸೇರಿದಂತೆ ಇತರೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಆಟೋ ಮೇಲೆ ರಕ್ತದ ಕಲೆಗಳು ಕಂಡು ಬಂದಿದ್ದು, ಆಟೋ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಇತರ ಮೂವರಲ್ಲಿ ಒಬ್ಬರು ಆಟೋ ಚಾಲಕರಾಗಿದ್ದಾರೆ. ಅತ್ಯಾಚಾರವೆಸಗಿ ಆಕೆಯನ್ನು ಎಸೆದು ಪರಾರಿಯಾಗಿದ್ದರು, ಬಾಲಕಿ ರಕ್ತಸಿಕ್ತ ಸ್ಥಿತಿಯಲ್ಲಿ ಸಹಾಯ ಬೇಡುತ್ತಾ 8 ಕಿ.ಮೀ ನಡೆದುಕೊಂಡು ಬಂದಿದ್ದಳು ಎಂದು ತಿಳಿಸಿದ್ದಾರೆ.
ಇನ್ನು ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ, ಆದರೆ ಸ್ಥಿರವಾಗಿದೆ. ಬಾಲಕಿ ಅನುಭವಿಸಿದ ಭಯಾನಕ ಸ್ಥಿತಿಯನ್ನು ಆಶ್ರಮದ ಅರ್ಚಕರೊಬ್ಬರು ವಿವರಿಸಿದ್ದಾರೆ.
ನಾನು ಸೋಮವಾರ ಬೆಳಗ್ಗೆ ಕೆಲಸದ ನಿಮಿತ್ತ ಆಶ್ರಮದಿಂದ ಹೊರ ಹೋಗುತ್ತಿದ್ದಾಗ ಗೇಟ್ ಬಳಿ ಅರೆಬೆತ್ತಲೆಯಾಗಿ ರಕ್ತಸ್ರಾವವಾಗುತ್ತಿದ್ದ ಬಾಲಕಿಯನ್ನು ಕಂಡಿದ್ದು, ಆಕೆಗೆ ಬಟ್ಟೆ ಕೊಟ್ಟೆ, ಬಾಲಕಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಕಣ್ಣುಗಳು ಊದಿಕೊಂಡಿದ್ದವು, ತಕ್ಷಣ ಪೊಲೀಸರಿಗೆ ಕರೆ ಮಾಡಿದೆ, ಪೊಲೀಸರು 20 ನಿಮಿಷಗಳ ಬಳಿಕ ಅಲ್ಲಿಗೆ ತಲುಪಿದ್ದಾರೆ ಎಂದಿದ್ದಾರೆ.
ಬಾಲಕಿ ಸಹಾಯ ಕೇಳಿದರೂ ಯಾರೂ ಸಹಾಯಕ್ಕೆ ಬರಲಿಲ್ಲ, ಇದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.