10 ಮತ್ತು 12 ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿ18 ವರ್ಷ ಪೂರೈಸಿರಬೇಕು. ಬೆರಳಚ್ಚುಗಾರರು 3 ಹುದ್ದೆ, ಬೆರಳಚ್ಚು ನಕಲುಗಾರರು 3 ಹುದ್ದೆ, ಆದೇಶ ಜಾರಿಕಾರರು 20 ಹುದ್ದೆ ಖಾಲಿ ಇದೆ.
ಹತ್ತನೇ ತರಗತಿ ಹಾಗೂ ಪಿಯುಸಿ ಪಾಸಾಗಿರುವ (10-12 ನೇ ತರಗತಿ) ಅಭ್ಯರ್ಥಿಗಳಿಂದ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕಾರವಾರದಲ್ಲಿರುವ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (Uttara Kannada Principal District and Sessions Court) ನೇಮಕಾತಿ ವಯೋಮಿತಿ ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಬಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ. ಬೆರಳಚ್ಚುಗಾರರು (Typist) ಮೂರು ಹುದ್ದೆ, ಬೆರಳಚ್ಚು ನಕಲುಗಾರರು (Typist-Copyist) ಮೂರು ಹುದ್ದೆ, ಆದೇಶ ಜಾರಿಕಾರರು (Process Server) 20 ಹುದ್ದೆ ಖಾಲಿ ಇದೆ. ಉದ್ಯೋಗ ಸ್ಥಳ- ಉತ್ತರ ಕನ್ನಡ ಜಿಲ್ಲೆ
ಆಯ್ಕೆ ವಿಧಾನ: ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ ಹುದ್ದೆಗೆ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವ ಕೌಶಲ್ಯ ಪರೀಕ್ಷೆಯಲ್ಲಿ ಗಳಿಸಿರುವ ಶೇಕಡಾವಾರು ಅಂಕಗಳು ಹಾಗೂ ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆದೇಶ ಜಾರಿಗಾರ ಹುದ್ದೆಗೆ ಶೈಕ್ಷಣಿಕ ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳು ₹ 300, ಪ್ರವರ್ಗ 2a,2b, 3b ಅಭ್ಯರ್ಥಿಗಳು 150 ರೂ, ಎಸ್‌ಸಿ-ಎಸ್‌ಟಿ ಪ್ರವರ್ಗ ಹಾಗೂ ಅಂಗವಿಕಲ ಅಭ್ಯರ್ಥಿಗಳು ₹ 100 ಅರ್ಜಿ ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಸುವ ವಿಧಾನ, ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಹಾಗೂ ಯುಪಿಐ ಮೂಲಕ ಶುಲ್ಕ ಪಾವತಿಸಬಹುದು.
ಸಲ್ಲಿಸುವ ವಿಧಾನ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ದಿನಾಂಕ: ಜಾಹೀರಾತು ಪ್ರಕಟಣೆ ದಿನಾಂಕ- 18 ಜೂನ್ 2024 ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 20 ಜೂನ್ 2024 ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮುಕ್ತಾಯ ದಿನಾಂಕ -19 ಜುಲೈ 2024
ಹುದ್ದೆಗಳ ಹೆಸರು: ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು ಹಾಗೂ ಆದೇಶ ಜಾರಿಕಾರರು. ಹುದ್ದೆಗಳ ಸಂಖ್ಯೆ ಒಟ್ಟು 26 ಬೆರಳಚ್ಚುಗಾರರು ಮೂರು ಹುದ್ದೆ, ಬೆರಳಚ್ಚು ನಕಲುಗಾರರು ಮೂರು ಹುದ್ದೆ, ಆದೇಶ ಜಾರಿಕಾರರು 20 ಹುದ್ದೆ ಖಾಲಿ ಇದೆ.
ಸಂಬಳ: ಬೆರಳಚ್ಚುಗಾರರು ಹಾಗೂ ಬೆರಳಚ್ಚು ನಕಲುಗಾರರು ಹುದ್ದೆಗೆ ಮಾಸಿಕ ರೂಪಾಯಿ 21,400 ರಿಂದ 42,000 ವೇತನ. ಆದೇಶ ಜಾರಿಕಾರರು ಹುದ್ದೆಗೆ ಮಾಸಿಕ ರೂಪಾಯಿ 19,950 ರಿಂದ 37,900 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
ಉದ್ಯೋಗ ಸ್ಥಳ– ಉತ್ತರ ಕನ್ನಡ ಜಿಲ್ಲೆ ವಿದ್ಯಾರ್ಹತೆ – ಬೆರಳಚ್ಚುಗಾರರು ಹುದ್ದೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಕಮರ್ಷಿಯಲ್ ಪ್ರಾಕ್ಟೀಸ್‌ನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರೌಢ ದರ್ಜೆ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಸೆಕ್ರೆಟರಿಯಲ್ ಪ್ರಾಕ್ಟೀಸ್ ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಬೆರಳಚ್ಚು ನಕಲುಗಾರರರು ಹುದ್ದೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಕಮರ್ಷಿಯಲ್ ಪ್ರಾಕ್ಟೀಸ್‌ನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.