ಮುಂಬೈ: ಗುರುವಾರ ಮುಂಬೈನ ದಹಿಸರ್ ಪ್ರದೇಶದಲ್ಲಿ ಶಿವಸೇನೆ (ಯುಬಿಟಿ) ಮುಖಂಡರೊಬ್ಬರು ಫೇಸ್ಬುಕ್ ಲೈವ್ಸ್ಟ್ರೀಮ್ ಮಾಡುತ್ತಿದ್ದಾಗ, ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶಿವಸೇನಾ (ಯುಬಿಟಿ) ನಾಯಕ ವಿನೋದ್ ಘೋಸಲ್ಕರ್ ಅವರ ಪುತ್ರ ಮತ್ತು ಮಾಜಿ ಕಾರ್ಪೊರೇಟರ್ ಅಭಿಷೇಕ್ ಘೋಸಲ್ಕರ್ ಅವರು ಮಾರಿಸ್ ಭಾಯ್ ಎಂದೂ ಕರೆಯಲ್ಪಡುವ ಮಾರಿಸ್ ನೊರೊನ್ಹಾ ಅವರೊಂದಿಗೆ ಫೇಸ್ಬುಕ್ ಲೈವ್ಸ್ಟ್ರೀಮ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮಾರಿಸ್ ನೊರೊನ್ಹಾ ಲೈವ್ಸ್ಟ್ರೀಮ್ ಅನ್ನು ತೊರೆದ ಬಳಿಕ, ಘೋಸಲ್ಕರ್ ಮೇಲೆ ಮೂರು ಬಾರಿ ಗುಂಡು ಹಾರಿಸಿದರು ಎನ್ನಲಾಗಿದೆ. ಇದಾದ ನಂತರ ಮಾರಿಸ್ ಭಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾರಿಸ್ ನೊರೊನ್ಹಾ ಬೊರಿವಲಿ ವೆಸ್ಟ್ ನಿವಾಸಿಯಾಗಿದ್ದು, ಸಮಾಜ ಸೇವಕನಾಗಿದ್ದ ಎನ್ನಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಹೊಂದಿದ್ದ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ ಘೋಸಲ್ಕರ್ ಮತ್ತು ನೊರೊನ್ಹಾ ಅವರಲ್ಲಿ ವೈಮನಸ್ಸು ಹೊಂದಿದ್ದು, ಇವೆಲ್ಲವನ್ನೂ ಮರೆತು ಜೊತೆಯಾಗಿದ್ದಾರೆ ಎಂದು ಸಂದೇಶವನ್ನು ನೀಡಲು ಫೇಸ್ಬುಕ್ ಲೈವ್ ಸ್ಪಷ್ಟಪಡಿಸಲು ಸೇರಿದ್ದರು. ಆದರೆ ಘೋಸಲ್ಕರ್ ತನ್ನ ಸಂದೇಶವನ್ನು ನೀಡಿದ ಬಳಿಕ ಕೊಠಡಿಯಿಂದ ಹೊರಬರಲು ತಯಾರಿ ನಡೆಸುತ್ತಿದ್ದಾಗ, ನೊರೊನ್ಹಾ ಅವರ ಮೇಲೆ ಗುಂಡು ಹಾರಿಸಿದ್ದಾನೆ ಈ ಘಟನೆಯನ್ನು ಫೇಸ್ಬುಕ್ ಲೈವ್ನಲ್ಲಿ ದಾಖಲಾಗಿದೆ.
ಪೊಲೀಸರ ಪ್ರಕಾರ, ಅಭಿಷೇಕ್ ಘೋಸಲ್ಕರ್ ಮತ್ತು ಮೌರಿಸ್ ನೊರೊನ್ಹಾ ಪರಸ್ಪರ ಅಕ್ಕಪಕ್ಕದಲ್ಲಿ ಕಚೇರಿಗಳನ್ನು ಹೊಂದಿದ್ದರು. ಸ್ಥಳೀಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಲು ಅವರ ನಡುವೆ ಜಗಳ ನಡೆದಿದೆ.
ಮೌರಿಸ್ ಭಾಯಿ ಘೋಸಲ್ಕರ್ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದು. ಇದಾದ ನಂತರ ಮೌರಿಸ್ ಭಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ, ‘ವೈಯಕ್ತಿಕ ದ್ವೇಷದ’ ಹಿನ್ನೆಲೆಯಲ್ಲಿ ಘೋಸಲ್ಕರ್ ಮೇಲೆ ಗುಂಡು ಹಾರಿಸಲಾಗಿದೆ ಎನ್ನಲಾಗಿದೆ.