ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ವೆಂಕಟೇಶ್ ಬಾಬು ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ವೆಂಕಟೇಶ್ ಬಾಬು ಅವರು ಮೈಸೂರು ವಿಶ್ವವಿದ್ಯಾನಿಲಯದ ಜೆಎಸ್ಎಸ್ ಸಂಶೋಧನಾ ಕೇಂದ್ರದ ವಾಣಿಜ್ಯಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಶಂಕ್ರಪ್ಪ ಅವರ ಮಾರ್ಗದರ್ಶನದಲ್ಲಿ ‘ಪರ್ಫಾರ್ಮೆನ್ಸ್ ಇವ್ಯಾಲ್ಯೂಯೇಷನ್ ಆಫ್ ಡಿಜಿಟಲ್ ಪ್ರಿಂಟಿAಗ್ ಅಂಡ್ ಪಬ್ಲಿಸಿಂಗ ಇಂಡಸ್ಟಿç ಇನ್ ಇಂಡಿಯಾ’ ಎಂಬ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದರು.
ಎಸ್.ವೆಂಕಟೇಶ್ ಬಾಬು ಅವರು ದಾವಣಗೆರೆ ವಾಸಿ ದಿ.ಟಿ.ಶಿವಾನಂದ್ ಸಿತಿಮನಿ ಮತ್ತು ಶಾಂತಮ್ಮ ದಂಪತಿಯ ಪುತ್ರರಾಗಿದ್ದಾರೆ.
				
															
                    
                    
                    
                    
                    































