ಕೊಚ್ಚಿ: ಕೇರಳದ ಪೊಟ್ಟನ್ಮಲಾ ಮೂಲದ ರಾಧಾಕೃಷ್ಣನ್ ತಮ್ಮ ಪತ್ನಿಯನ್ನು ಕಳೆದುಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಪತ್ನಿ ಇಲ್ಲದೆ ಇದ್ದರೂ ತನ್ನ ಮೂವರು ಮಕ್ಕಳೊಂದಿಗೆ ಖುಷಿ ಆಗಿದ್ದ ರಾಧಾಕೃಷ್ಣನ್ ಅವರಿಗೆ ಒಂಟಿತನ ಕಾಡುತ್ತಿತ್ತು. ಇದನ್ನು ಗಮನಿಸಿದ ಮಕ್ಕಳು ತಂದೆಯ 62 ರ ವಯಸ್ಸಿನಲ್ಲಿ ೬೦ ವಯಸ್ಸಿನ ಸಂಗಾತಿಯನ್ನು ಹುಡುಕಿ ಮದುವೆ ಮಾಡಿದ್ದಾರೆ. ಮಕ್ಕಳಾದ ರಶ್ಮಿ ಮತ್ತು ರಂಜು ಅವರು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಹೊಂದಿಕೆಯಾಗುವ ಸಂಗಾತಿಯನ್ನು ಮಕ್ಕಳು ಹುಡುಕಿದ್ದಾರೆ. ಅದರಂತೆ ಅಡೂರಿನ ಮಲ್ಲಿಕಾ ಕುಮಾರಿ (60) ಅವರನ್ನು ಆಯ್ದುಕೊಂಡು ಮಕ್ಕಳೇ ಮುಂದೆ ನಿಂತು ಎರಂಕಾವು ಭಗವತಿ ದೇವಸ್ಥಾನದಲ್ಲಿ ವಿವಾಹ ಮಾಡಿಸಿದ್ದಾರೆ. ಮಲ್ಲಿಕಾ ಕುಮಾರಿ ಅವರ ಪತಿ 5 ವರ್ಷಗಳ ಹಿಂದೆ ನಿಧನರಾಗಿದ್ದು, ಅವರಿಗೆ ಮಕ್ಕಳಾಗಿರಲಿಲ್ಲ.


































