ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾಣಿಜ್ಯ ಮಳಿಗೆಗಳು, ಉದ್ಯಮಗಳು ಹಾಗೂ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60
ಕನ್ನಡ ಅಳವಡಿಕೆ ಮಾಡುವುದಕ್ಕೆ ಫೆ.28ರವರೆಗೆ ಗಡುವು ನೀಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 40 ಸಾವಿರಕ್ಕೂ ಅಧಿಕ ಅಂಗಡಿಗಳು ನಾಮಫಲಕವನ್ನ ಬದಲಾವಣೆ ಮಾಡಿದ್ದಾರೆ. ಇನ್ನೂ 6 ರಿಂದ 7 ಸಾವಿರ
ಮಳಿಗೆಗಳು ಕನ್ನಡ ನಾಮಫಲಕ ಶೇ.60 ರಷ್ಟು ಹಾಕಿಲ್ಲ. ಅಂತಹ ಮಳಿಗೆಗಳಿಗೆ ನೋಟಿಸ್ ನೀಡುವ ಕಾರ್ಯ ನಡೆದಿದೆ.