ಬೆಂಗಳೂರು : ದಿನಾಂಕ:30/06/2024 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2024ರ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ-ಉತ್ತರಗಳನ್ನು ದಿನಾಂಕ:08/07/2024 ರಂದು ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಪ್ರಕಟಿತ ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವ ಬಗ್ಗೆ ಅಭ್ಯರ್ಥಿಗಳು ಕೆಳಕಂಡ ಸೂಚನೆಗಳನ್ನು ಪಾಲಿಸುವುದು.
- ಪತ್ರಿಕೆ-1 ಮತ್ತು ಪತ್ರಿಕೆ-2ಕ್ಕೆ ಸಂಬಂಧಿಸಿದಂತೆ ಪ್ರಕಟಿತ ಕೀ-ಉತ್ತರಗಳಿಗೆ ಆನ್ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ದಿನಾಂಕ:13/07/2024 ರ ಸಂಜೆ 5.30 ರವರೆಗೆ ಅವಕಾಶ ಕಲ್ಪಿಸಿದೆ.
- ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಕೇವಲ ಆನ್ಲೈನ್ ಮೂಲಕ ಸಲ್ಲಿಸಬೇಕು. ಆನ್ಲೈನ್ ಮೂಲಕ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಆಕ್ಷೇಪಣೆ ಸಲ್ಲಿಸಿದಲ್ಲಿ, ಅವುಗಳನ್ನು ಪರಿಗಣಿಸಲಾಗುವುದಿಲ್ಲ.
- ಅಭ್ಯರ್ಥಿಗಳು ತಮ್ಮ ಅರ್ಜಿ/ ನೋಂದಣಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸುವ ಮೂಲಕ https://schooleducation.karnataka.gov.in ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿದ ನಂತರ ಆಕ್ಷೇಪಣೆಗೆ ಸಂಬಂಧಿಸಿದ ವೆಬ್ಪೆಜ್ ತೆರೆದುಕೊಳ್ಳುತ್ತದೆ.
- ಅಭ್ಯರ್ಥಿಯು ಸಲ್ಲಿಸುವ ಆಕ್ಷೇಪಣೆಗಳೊಂದಿಗೆ ಅಧಿಕೃತ ಆಧಾರ/ ದಾಖಲೆಗಳನ್ನು ಸಲ್ಲಿಸುವುದು.
- ಸೂಕ್ತ ಆಧಾರ ದಾಖಲೆಗಳಿಲ್ಲದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
- ಆಧಾರ ದಾಖಲೆಗಳು 500KB ಮೀರಬಾರದು.
- ವಿಷಯಕ್ಕೆ ಸಂಬಂಧಿಸದ ಅಸಂಬದ್ಧ ದಾಖಲೆಗಳನ್ನು ಹಾಗೂ ಚಿತ್ರಗಳನ್ನು ಅಪ್ಲೋಡ್ ಮಾಡಿದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.
- ಜರ್ನಲ್ಗಳು, ಮ್ಯಾಗಜಿನ್ಗಳು, ಸ್ವತಂತ್ರ ಪ್ರಕಾಶಕರುಗಳ ಪುಸ್ತಕಗಳು, ಗೈಡ್ಗಳು, ಇಂಟರ್ನೆಟ್ ಮೂಲಗಳು(ವಿಕಿಪೀಡಿಯಾ, ಗೂಗಲ್ ಮಾಹಿತಿ ಅಥವಾ ಅಂತರ್ಜಾಲದಿಂದ ಡೌನ್ಲೋಡ್ ಮಾಡಿದ ಯಾವುದೇ ಮೂಲಗಳು) ವಿಡಿಯೋಗಳು, ದಿನಪತ್ರಿಕೆಯಲ್ಲಿನ ಲೇಖನಗಳನ್ನು ಆಧಾರ ದಾಖಲೆಗಳನ್ನಾಗಿ ಪರಿಗಣಿಸುವುದಿಲ್ಲ.
- ಸ್ವೀಕರಿಸಲಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ತಂಡವು ಪರಿಶೀಲಿಸಿ ನೀಡುವ ಅಂತಿಮ ಉತ್ತರವನ್ನು ಪರಿಗಣಿಸಲಾಗುವುದು. ತಜ್ಞರ ತಂಡವು ನೀಡುವ ಉತ್ತರವೇ ಅಂತಿಮವಾಗಿರುತ್ತದೆ.