ಬೆಂಗಳೂರು: ಮೈಸೂರಿನ ಮುಡಾ ಸೈಟ್ ಹಂಚಿಕೆ ಬಿಜೆಪಿ ಅವಧಿಯಲ್ಲಿ ಕೊಟ್ಟಿರುವ ನಿವೇಶನ ಇದಾಗಿದೆ. ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಸ್ವಾಧೀನ ಮಾಡಿಕೊಂಡ ಜಾಗಕ್ಕೆ ಬದಲಿ ನಿವೇಶನ ಕೊಟ್ಟಿದ್ದಾರೆ. ಕಾನೂನು ಪ್ರಕಾರವೇ ಸೈಟ್ ಹಂಚಿಕೆ ಆಗಿದೆ ಎಂದು ಸಿಎಂ ಹೇಳಿದ್ದಾರೆ.
ಪತ್ನಿಗೆ ಬದಲಿ ನಿವೇಶನ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನನ್ನ ಹೆಂಡತಿ ಜಾಗ ಅಂತ ಆಗ ನಾವು ಕೇಳಿದ್ವಿ. ನನ್ನ ಬಾಮೈದನ ಜಾಗವನ್ನ ನನ್ನ ಹೆಂಡತಿಗೆ ಗಿಫ್ಟ್ ಡೀಡ್ ಮಾಡಿದ್ರು. ಮುಡಾದವರು ಈ ಜಾಗವನ್ನ ಯಾವುದೇ ಮಾಹಿತಿ ಇಲ್ಲದೆ ಅಕ್ವೈರ್ ಮಾಡಿಕೊಂಡು ಸೈಟ್ ಮಾಡಿದ್ರು. ಆಗ ನಮ್ಮ ಜಮೀನಿಗೆ ಪರಿಹಾರ ಕೊಡಿ ಅಂತ ನಾವು ಕೇಳಿದಾಗ ಬದಲಿ ನಿವೇಶನ ಕೊಡೋದಾಗಿ ಹೇಳಿದ್ರು. ಅದರಂತೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಆಗಿದೆ ಎಂದು ಸ್ಪಷ್ಟನೆ ನೀಡಿದರು.
ಅದಕ್ಕೆ ಬೇರೆ ಕಡೆ ಜಮೀನು ಕೊಟ್ಟರು, ಇದು ತಪ್ಪಾ? ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಕಾನೂನು ಪ್ರಕಾರವೇ ಇದು ಹಂಚಿಕೆ ಆಗಿದೆ ಎಂದು ಸಿಎಂ ತಿಳಿಸಿದರು.